ಸಿಎಎ ಜಾರಿಗೆ ತಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಸದುದ್ದೀನ್ ಉವೈಸಿ
ಸುಪ್ರೀಂ ಕೋರ್ಟ್ , ಅಸದುದ್ದೀನ್ ಉವೈಸಿ | Photo: PTI
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗೆ ತಡೆ ನೀಡಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪೌರತ್ವ ಕಾಯ್ದೆ, 1955ರ ಸೆಕ್ಷನ್ 6ಬಿ ಅನ್ವಯ, ಪೌರತ್ವ ಪ್ರಕ್ರಿಯೆ ಬಾಕಿ ಇರುವಾಗ ಸರಕಾರವು ಪೌರತ್ವ ಸ್ಥಿತಿಗೆ ಕೋರಿರುವ ಅರ್ಜಿಯನ್ನು ಮಾನ್ಯ ಮಾಡುವುದಾಗಲಿ ಅಥವಾ ಅದನ್ನು ಪ್ರಕ್ರಿಯೆಗೊಳಪಡಿಸುವುದಾಗಲಿ ಮಾಡುವಂತಿಲ್ಲ ಎಂದು ಉವೈಸಿ ಅರ್ಜಿಯಲ್ಲಿ ವಾದಿಸಿದ್ದಾರೆ. (ಆದರೆ, ಈ ಕಾಯ್ದೆಯು ಪೌರತ್ವ ತಿದ್ದುಪಡಿ ಕಾಯ್ದೆ, 2019ರಿಂದ ತಿದ್ದುಪಡಿಗೊಳಗಾಗಿದೆ).
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತು ಡಿಸೆಂಬರ್ 2019ರಲ್ಲೇ ಅಂಗೀಕರಿಸಿತ್ತಾದರೂ, ಈ ಕಾಯ್ದೆಯ ನಿಯಮಗಳ ಅಧಿಸೂಚನೆಯನ್ನು ಸೋಮವಾರವಷ್ಟೇ ಕೇಂದ್ರ ಸರಕಾರ ಪ್ರಕಟಿಸಿತ್ತು.
Next Story