ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷಾ ವರದಿ ಸಲ್ಲಿಕೆಗೆ ಇನ್ನೂ 3 ವಾರ ಕೋರಿದ ಎಎಸ್ಐ
ಜ್ಞಾನವಾಪಿ ಮಸೀದಿ | Photo: PTI
ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಸಲ್ಲಿಸಲು ಇನ್ನೂ ಮೂರು ವಾರಗಳ ಸಮಯಾವಕಾಶ ನೀಡುವಂತೆ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆ (ಎಎಸ್ಐ)ಯು ವಾರಾಣಸಿಯ ಜಿಲ್ಲಾ ನ್ಯಾಯಾಲಯವನ್ನು ಕೋರಿದೆ. ಈ ಮನವಿಯ ವಿಚಾರಣೆಯನ್ನು ನ್ಯಾಯಾಲಯವು ಬುಧವಾರ ನಡೆಸಲಿದೆ.
ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ನವೆಂಬರ್ 28ರೊಳಗೆ ಸಲ್ಲಿಸುವಂತೆ ನ್ಯಾಯಾಲಯವು ಇಲಾಖೆಗೆ ಸೂಚಿಸಿತ್ತು.
ಮಂಗಳವಾರ, ಇಲಾಖೆಯು ಮೂರು ವಾರಗಳ ವಿಸ್ತರಣೆ ಕೋರಿದೆ. ವಿವಿಧ ಪರಿಣತರು ಕಲೆಹಾಕಿರುವ ಮಾಹಿತಿಯನ್ನು ಹೊಂದಿಸಲು ತನಗೆ ಇನ್ನೂ ಸಮಯಾವಕಾಶ ಬೇಕು ಎಂದು ಅದು ನ್ಯಾಯಾಲಯದಲ್ಲಿ ಹೇಳಿದೆ.
ಪುರಾತನ ಶಾಸ್ತ್ರಜ್ಞರು, ಸರ್ವೇಯರ್ಗಳು ಮತ್ತು ಇತರ ಪರಿಣತರು ಸಂಗ್ರಹಿಸಿರುವ ವಿವಿಧ ಮಾದರಿಯ ದತ್ತಾಂಶಗಳ ವಿಶ್ಲೇಷಣೆಯನ್ನು ನಮ್ಮ ಪರಿಣತರು ನಡೆಸುತ್ತಿದ್ದಾರೆ ಎಂದು ತನ್ನ ಅರ್ಜಿಯಲ್ಲಿ ಪುರಾತತ್ವ ಇಲಾಖೆ ಹೇಳಿದೆ.
Next Story