ರಾಮ ಮಂದಿರದ ಅರ್ಚಕರು ಧರಿಸುವ ವಸ್ತ್ರಗಳ ಬಣ್ಣ ಕೇಸರಿಯಿಂದ ಹಳದಿಗೆ ಬದಲಾವಣೆ, ಮೊಬೈಲ್ ಫೋನ್ಗಳಿಗೆ ನಿಷೇಧ
ರಾಮ ಮಂದಿರ (PTI)
ಅಯೋಧ್ಯೆ: ರಾಮ ಮಂದಿರ ಅರ್ಚಕರು ಧರಿಸುವ ವಸ್ತ್ರಗಳ ಬಣ್ಣವನ್ನು ಕೇಸರಿಯಿಂದ ಹಳದಿಗೆ ಬದಲಿಸಲಾಗಿದ್ದು, ಅವರು ಮಂದಿರಕ್ಕೆ ಮೊಬೈಲ್ ಫೋನ್ಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ರಾಮಮಂದಿರ ಟ್ರಸ್ಟ್ನ ಅಧಿಕಾರಿಗಳು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇತ್ತೀಚಿನವರೆಗೆ ರಾಮಮಂದಿರದ ಗರ್ಭಗುಡಿಯ ಅರ್ಚಕರು ಕೇಸರಿ ಪೇಟ, ಕೇಸರಿ ಕುರ್ತಾ ಹಾಗೂ ಕೇಸರಿ ಪಂಚೆಯನ್ನು ಧರಿಸುತ್ತಿದ್ದರು.
ಇದೀಗ ಅರ್ಚಕರು ಹಳದಿ (ಪೀತಾಂಬರಿ) ಬಣ್ಣದ ಪೇಟದೊಂದಿಗೆ ಹಳದಿ ಪಂಚೆ ಹಾಗೂ ಹಳದಿ ಕುರ್ತಾವನ್ನು ತೊಡುತ್ತಿದ್ದಾರೆ. ಹೊಸ ವಸ್ತ್ರ ಸಂಹಿತೆಯನ್ನು ಜುಲೈ 1ರಿಂದ ಜಾರಿಗೊಳಿಸಲಾಗಿದೆ ಎಂದು ರಾಮ ಮಂದಿರದ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಅರ್ಚಕರಿಗೆ ಹಳದಿ ಪೇಟ ಹೇಗೆ ತೊಡಬೇಕು ಎಂಬುದರ ಕುರಿತು ತರಬೇತಿ ನೀಡಲಾಗುತ್ತಿದೆ.
Next Story