ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ | ವಿಮಾನಗಳ ಮಾರ್ಗ ಬದಲು, ವಿಳಂಬ
PC : X
ಹೊಸದಿಲ್ಲಿ : ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿನ ಪ್ರತಿಕೂಲ ಹವಾಮಾನವು ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಗಳ ಗೋಚರತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದ್ದರಿಂದ ಒಟ್ಟು 11 ಯಾನಗಳ ಮಾರ್ಗಗಳನ್ನು ಬದಲಿಸಲಾಗಿತ್ತು ಮತ್ತು ಹಲವಾರು ಯಾನಗಳು ವಿಳಂಬಗೊಂಡಿದ್ದವು ಎಂದು ಅಧಿಕಾರಿಯೋರ್ವರು ತಿಳಿಸಿದರು.
ಕಡಿಮೆ ಗೋಚರತೆಯಿಂದಾಗಿ ವಿಮಾನಯಾನಗಳಲ್ಲಿ ವ್ಯತ್ಯಯಗಳಾಗಬಹುದು ಎಂದು ಸ್ಪೈಸ್ ಜೆಟ್ ಮತ್ತು ಇಂಡಿಗೋ ಎಕ್ಸ್ ಪೋಸ್ಟ್ಗಳ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದವು.
11 ವಿಮಾನಗಳ ಪೈಕಿ 10ನ್ನು ಜೈಪುರಕ್ಕೆ ಮತ್ತು ಒಂದನ್ನು ಡೆಹ್ರಾಡೂನ್ಗೆ ತಿರುಗಿಸಲಾಗಿತ್ತು. ಕೆಲವು ಪೈಲಟ್ಗಳು ಅಂಖಿ III (ಕಡಿಮೆ ಗೋಚರತೆ) ಕಾರ್ಯಾಚರಣೆ ತರಬೇತಿ ಪಡೆದಿಲ್ಲ. ಇದು ವಿಮಾನಗಳ ಮಾರ್ಗ ಬದಲಿಸಲು ಕಾರಣವಾಗಿತ್ತು. ಅಂಖಿ III ತರಬೇತಿ ಪಡೆದ ಪೈಲಟ್ಗಳು ಅತ್ಯಂತ ಕಡಿಮೆ ಗೋಚರತೆ ಸ್ಥಿತಿಗಳಲ್ಲಿ ವಿಮಾನಗಳನ್ನು ಟೇಕ್ಆಫ್ ಮಾಡುವ ಅಥವಾ ಲ್ಯಾಂಡ್ ಮಾಡಲು ಅನುಮತಿಯನ್ನು ಹೊಂದಿರುತ್ತಾರೆ.
ದಿಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿದಿನ ಸುಮಾರು 1,400 ವಿಮಾನ ಹಾರಾಟಗಳನ್ನು ನಿರ್ವಹಿಸುತ್ತದೆ.