ಮುಂದಿನ ವರ್ಷದ ಮಾರ್ಚ್ ವರೆಗೆ ಈರುಳ್ಳಿ ರಫ್ತಿಗೆ ನಿಷೇಧ
File photo
ಹೊಸದಿಲ್ಲಿ: ಕೇಂದ್ರ ಸರಕಾರವು ದೇಶಿಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬೆಲೆಗಳನ್ನು ನಿಯಂತ್ರಿಸಲು ಮುಂದಿನ ವರ್ಷದ ಮಾರ್ಚ್ ವರೆಗೆ ಈರುಳ್ಳಿಯ ರಫ್ತನ್ನು ನಿಷೇಧಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಈರುಳ್ಳಿ ಪ್ರತಿ ಕೆ.ಜಿ.ಗೆ 70ರಿಂದ 80ರೂ.ಗಳಿಗೆ ಮಾರಾಟವಾಗುತ್ತಿದೆ.
ಕೇಂದ್ರವು ಕಳೆದ ಅಕ್ಟೋಬರ್ನಲ್ಲಿ ಬಳಕೆದಾರರಿಗೆ ನಿರಾಳತೆಯನ್ನುಂಟು ಮಾಡಲು ಮೀಸಲು ದಾಸ್ತಾನನ್ನು ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ.ಗೆ 25 ರೂ.ಬೆಲೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿತ್ತು.
ಸರಕಾರವು ಬೆಲೆಗಳನ್ನು ನಿಯಂತ್ರಿಸಲು ಈ ಹಿಂದೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿತ್ತು. ಅದು ಅ.28ರಂದು ಈ ವರ್ಷದ ಡಿಸೆಂಬರ್ 31ರವರೆಗೆ ಈರುಳ್ಳಿ ರಫ್ತುಗಳಿಗೆ ಪ್ರತಿ ಟನ್ನಿಗೆ 800 ಡಾಲರ್ಗಳ ಕನಿಷ್ಠ ರಫ್ತು ಬೆಲೆಯನ್ನು ವಿಧಿಸಿತ್ತು. ಆಗಸ್ಟ್ ನಲ್ಲಿ ಡಿ.31ರವರೆಗೆ ಈರುಳ್ಳಿಯ ಮೇಲೆ ಶೇ.40ರಷ್ಟು ರಫ್ತು ಸುಂಕವನ್ನು ಹೇರಲಾಗಿತ್ತು.
Next Story