ಪ್ರೀತಿಯ ಸೋದರಿ, ಸೋದರ,ರೈತರು ಗೆಲುವಿಗೆ ಕಾರಣ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ
ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ | PC : PTI
ಮುಂಬೈ: ‘ಇಂದು ನಮ್ಮ ಮತ್ತು ಮಹಾರಾಷ್ಟ್ರದ ಪಾಲಿಗೆ ಐತಿಹಾಸಿಕ ದಿನವಾಗಿದೆ. ಜನರು ಚುನಾವಣೆಯನ್ನು ತಮ್ಮ ಕೈಗಳಲ್ಲಿ ತೆಗೆದುಕೊಂಡಿದ್ದರು ಎನ್ನುವುದನ್ನು ಮಹಾಯುತಿ ಮೈತ್ರಿಕೂಟದ ಅದ್ಭುತ ಗೆಲುವು ತೋರಿಸಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಶನಿವಾರ ಇಲ್ಲಿ ಹೇಳಿದರು.
ಲಡ್ಕಿ ಬಹೀಣ,ಲಡ್ಕಾ ಭಾವು,ಲಡ್ಕಾ ಶೇತಕರಿ(ಪ್ರೀತಿಯ ಸೋದರಿ,ಪ್ರೀತಿಯ ಸೋದರ,ಪ್ರೀತಿಯ ರೈತ);ಹೀಗೆ ಪ್ರತಿಯೊಬ್ಬರೂ ಮಹಾಯುತಿಯ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ನಾವು ಮಾಡಿರುವ ಕೆಲಸಗಳನ್ನು ಜನರು ನೋಡಿದ್ದಾರೆ. ನಾವು ಅಭಿವೃದ್ಧಿಗೆ ಆದ್ಯತೆ ನೀಡಿದ್ದೆವು. ಅವರು(ಹಿಂದಿನ ಸರಕಾರ) ಎರಡು ವರ್ಷಗಳ ಕಾಲ ಎಲ್ಲ ಕೆಲಸಗಳನ್ನೂ ನಿಲ್ಲಿಸಿದ್ದರು,ಆದರೆ ನಾವು ಅವುಗಳನ್ನು ಮತ್ತೆ ಆರಂಭಿಸಿದ್ದೆವು’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿಂದೆ ಹೇಳಿದರು.
Next Story