ಬಿಹಾರ | ಭಾರೀ ಆಲಿಕಲ್ಲು ಮಳೆ, ಸಿಡಿಲಿಗೆ ಕನಿಷ್ಠ 25 ಮಂದಿ ಬಲಿ

ಸಾಂದರ್ಭಿಕ ಚಿತ್ರ
ಪಟ್ನಾ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿದ ಆಲಿಕಲ್ಲು ಮಳೆ, ಗಾಳಿಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಸಿಡಿಲಿನ ಅಬ್ಬರಕ್ಕೆ ಕನಿಷ್ಠ 25 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಬಿಹಾರದ ಪಾಟ್ನಾ, ಭೋಜ್ಪುರ, ಬಕ್ಸರ್, ಸಸಾರಾಮ್, ಛಾಪ್ರಾ, ಕೈಮೂರ್, ಸಿತಾಮರ್ಹಿ, ಶಿವಾರ್, ದರ್ಬಂಗಾ, ಸಹರ್ಸಾ, ಮಧುಬನಿ ಮತ್ತು ಅರಾರಿಯಾ ಮತ್ತು ಇತರ ಜಿಲ್ಲೆಗಳಲ್ಲಿ ಮಳೆ-ಸಿಡಿಲಿನಿಂದ ಜನರು ತೀವ್ರ ನಷ್ಟ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ.
ಗಂಟೆಗೆ ಸುಮಾರು 65 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಸಿವಾನ್ ಪ್ರದೇಶದಲ್ಲಿ ಸಿಡಿಲು ಬಡಿದು ಇಬ್ಬರು ಹಾಗೂ ನಳಂದ ಜಿಲ್ಲೆಯ ಒಂದರಲ್ಲೇ 18 ಮಂದಿ ಸೇರಿ ಒಟ್ಟು ಇಪ್ಪತ್ತೈದು ಜನರು ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತುರ್ತು ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Next Story