ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ
Screengrab:X/@DrSanjeev0121
ಪಾಟ್ನಾ: ನಿರ್ಮಾಣ ಹಂತದಲ್ಲಿದ್ದ ಬಿಹಾರದಲ್ಲಿನ ಅಗುವಾನಿ-ಸುಲ್ತಾನ್ ಗಂಜ್ ಸೇತುವೆಯ ಪಾರ್ಶ್ವವೊಂದು ಕುಸಿದು ಬಿದ್ದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ವರದಿಗಳ ಪ್ರಕಾರ, ಕಳೆದ ನಾಲ್ಕು ವಾರಗಳಲ್ಲಿ ಬಿಹಾರದಲ್ಲಿ 15 ಸೇತುವೆಗಳು ಕುಸಿದು ಬಿದ್ದಿವೆ. ಈ ಪೈಕಿ ಭಾರಿ ಪ್ರವಾಹದ ಒತ್ತಡಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿರುವ ಅರಾರಿಯ ಜಿಲ್ಲೆಯ ಫೋರ್ಬ್ಸ್ ಗಂಜ್ ಬ್ಲಾಕ್ ನ ಅಮ್ಹಾರ ಗ್ರಾಮದಲ್ಲಿರುವ ಪಾರ್ಮನ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯೂ ಸೇರಿದೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಹಲವಾರು ಸೇತುವೆ ಕುಸಿತದ ಕುರಿತು ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ಜುಲೈ 28ರಂದು ಬಿಹಾರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
Next Story