ಬಿರ್ಸಾ ಮುಂಡಾ ಮರಿ ಮೊಮ್ಮಗ ನಿಧನ
PC : NDTV
ರಾಂಚಿ : ರಸ್ತೆ ಅಪಘಾತದಲ್ಲಿ ಗಾಯಗೊಂಡ ಬಳಿಕ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಮರಿ ಮೊಮ್ಮಗ ಮಂಗಲ್ ಮುಂಡಾ ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಮಂಗಲ್ ಮುಂಡಾ ಅವರು ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಆರ್ಐಎಂಎಸ್)ನಲ್ಲಿ ಶುಕ್ರವಾರ ಮುಂಜಾನೆ 12.30ಕ್ಕೆ ಕೊನೆಯುಸಿರೆಳೆದರು ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್ನ ಖುಂಟಿ ಜಿಲ್ಲೆಯಲ್ಲಿ ನವೆಂಬರ್ 25ರಂದು ಪ್ರಯಾಣಿಕರ ವಾಹನದ ಛಾವಣಿಯಿಂದ ಕೆಳಗೆ ಬಿದ್ದ ಬಳಿಕ ಮುಂಡಾ ಅವರ ತಲೆಗೆ ತೀವ್ರ ಗಾಯವಾಗಿತ್ತು.
‘‘ಬಿರ್ಸಾ ಮುಂಡಾ ಅವರು ಮರಿ ಮೊಮ್ಮಗ ಮಂಗಲ್ ಮುಂಡಾ ಅವರು ಹೃದಯಾಘಾತದಿಂದ ಮುಂಜಾನೆ 12.30ಕ್ಕೆ ನಿಧನರಾಗಿದ್ದಾರೆ. ತೀವ್ರ ಗಾಯಗೊಂಡ ಬಳಿಕ ಅವರು ವೆಂಟಿಲೇಟರ್ನಲ್ಲಿದ್ದರು. ನಾವು ಅವರನ್ನು ರಕ್ಷಿಸಲು ಪ್ರಯತ್ನಿಸಿದೆವು. ಆದರೆ, ಸಾಧ್ಯವಾಗಲಿಲ್ಲ’’ ಎಂದು ಆರ್ಐಎಂಎಸ್ನ ವೈದ್ಯಾಧಿಕಾರಿ ಡಾ. ಹಿರೇಮ್ ಬಿರುವಾ ತಿಳಿಸಿದ್ದಾರೆ.