ಸದನದಲ್ಲಿ ಉಪಸ್ಥಿತರಿರುವಂತೆ ಸಂಸದರಿಗೆ ಬಿಜೆಪಿ, ಕಾಂಗ್ರೆಸ್ ಸಚೇತಾಕಾಜ್ಞೆ

ಲೋಕಸಭೆ | PC : PTI
ಹೊಸದಿಲ್ಲಿ : ಲೋಕಸಭೆಯಲ್ಲಿ ಬುಧವಾರ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆಯಾಗಲಿರುವುದರಿಂದ ಕಲಾಪದ ವೇಳೆ ತನ್ನ ಎಲ್ಲಾ ಸಂಸದರು ಸದನದಲ್ಲಿ ಹಾಜರಿರಬೇಕೆಂದು ಬಿಜೆಪಿಯು ಮಂಗಳವಾರ ಸಚೇತಕಾಜ್ಞೆಯನ್ನು ಜಾರಿಗೊಳಿಸಿದೆ.
ಕಾಂಗ್ರೆಸ್ ಪಕ್ಷವು ಕೂಡಾ ಸಂಸತ್ ಅಧಿವೇಶನದ ಮುಂದಿನ ಮೂರು ದಿನಗಳವರೆಗೆ ತನ್ನ ಎಲ್ಲಾ ಸಂಸದರು ಸದನದಲ್ಲಿ ಉಪಸ್ಥಿತರಿರಬೇಕೆಂದು ಸಚೇತಾಕಾಜ್ಞೆ ಹೊರಡಿಸಿದೆ.
ಈ ಹಿಂದೆ ವಿಧೇಯಕಕ್ಕೆ ಸಂಬಂಧಿಸಿ ಎನ್ಡಿಎ ಮೈತ್ರಿಕೂಟದ ಪಕ್ಷಗಳು ಮಂಡಿಸಿದ್ದ ಸಲಹೆಗಳನ್ನು ಜಂಟಿ ಸಂಸದೀಯ ಸಮಿತಿಯು ಅನುಮೋದಿಸಿತ್ತು. ಬುಧವಾರ ಮಂಡನೆಯಾಗಲಿರುವ ಮಸೂದೆಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
Next Story