ಕಳೆದ 10 ವರ್ಷಗಳಿಂದ ಬಿಜೆಪಿ ಜಾತ್ಯತೀತವೂ ಅಲ್ಲ, ನಾಗರಿಕವೂ ಆಗಿ ಉಳಿದಿಲ್ಲ: ಕಪಿಲ್ ಸಿಬಲ್ ವಾಗ್ದಾಳಿ
ಕಪಿಲ್ ಸಿಬಲ್ | PC : PTI
ಹೊಸದಿಲ್ಲಿ: "ಜಾತ್ಯತೀತ ನಾಗರಿಕ ಸಂಹಿತೆ" ಜಾರಿಗೊಳಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿರುವ ಬೆನ್ನಲ್ಲೇ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, "ಕಳೆದ 10 ವರ್ಷಗಳಿಂದ ಬಿಜೆಪಿ ಜಾತ್ಯತೀತವೂ ಅಲ್ಲ; ನಾಗರಿಕವೂ ಆಗಿ ಉಳಿದಿಲ್ಲ" ಎಂದು ಹೇಳಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಜಾತ್ಯತೀತ ಮತ್ತು ನಾಗರಿಕ ದೇಶ ಇಂದಿನ ಅಗತ್ಯತೆ" ಎಂದು ಹೇಳಿದ್ದಾರೆ.
ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ "ಜಾತ್ಯತೀತ ನಾಗರಿಕ ಸಂಹಿತೆ" ದೇಶದ ಇಂದಿನ ಅಗತ್ಯತೆ ಎಂದು ಹೇಳಿದ್ದರು. ಹಾಲಿ ಇರುವ ಕಾನೂನುಗಳು ಕೋಮುವಾದಿ ನಾಗರಿಕ ಸಂಹಿತೆ ಮತ್ತು ತಾರತಮ್ಯದಿಂದ ಕೂಡಿದ್ದು ಎಂದು ಹೇಳಿದ್ದರು.
"ನನ್ನ ಅಭಿಪ್ರಾಯದಲ್ಲಿ ಇಂದಿನ ಅಗತ್ಯತೆ: ಜಾತ್ಯತೀತ ಮತ್ತು ನಾಗರಿಕ ದೇಶ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಜಾತ್ಯತೀತವೂ ಆಗಿಲ್ಲ ಅಥವಾ ನಾಗರಿಕವೂ ಆಗಿರಲಿಲ್ಲ" ಎಂದು ಮಾಜಿ ಕೇಂದ್ರ ಸಚಿವರು ಟೀಕಿಸಿದ್ದಾರೆ.