ಅಂಬೇಡ್ಕರ್, ಭಗತ್ ಸಿಂಗ್ ಅವರ ಫೋಟೋಗಳನ್ನು ಸಿಎಂ ಕಚೇರಿಯಿಂದ ತೆಗೆಯಲಾಗಿದೆ: ಮಾಜಿ ಸಿಎಂ ಅತಿಶಿ ಆರೋಪ
"ಬಿಜೆಪಿಯು ದಲಿತ ವಿರೋಧಿ ಮನಸ್ಥಿತಿ ಹೊಂದಿದೆ"

Photo credit: X/@AamAadmiParty
ಹೊಸದಿಲ್ಲಿ: ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳನ್ನು ಸಿಎಂ ಕಚೇರಿಯಿಂದ ತೆಗೆಯಲಾಗಿದೆ ಎಂದು ಆರೋಪಿಸಿರುವ ದಿಲ್ಲಿ ಮಾಜಿ ಮುಖ್ಯಮಂತ್ರಿ ಅತಿಶಿ, ಬಿಜೆಪಿಯು ದಲಿತ ವಿರೋಧಿ ಮನಸ್ಥಿತಿ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಭಾರತೀಯ ಜನತಾ ಪಕ್ಷದ ದಲಿತ ವಿರೋಧಿ ಮನಸ್ಥಿತಿ ಎಲ್ಲರಿಗೂ ತಿಳಿದಿದೆ. ಇಂದು, ಅದರ ದಲಿತ ವಿರೋಧಿ ಮನಸ್ಥಿತಿಗೆ ಪುರಾವೆ ಸಿಕ್ಕಿದೆ. ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿ ಸರ್ಕಾರದ ಪ್ರತಿಯೊಂದು ಕಚೇರಿಯಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಶಹೀದ್ ಭಗತ್ ಸಿಂಗ್ ಅವರ ಫೋಟೋಗಳನ್ನು ಹಾಕಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಈ ಎರಡೂ ಫೋಟೋಗಳನ್ನು ಮುಖ್ಯಮಂತ್ರಿ ಕಚೇರಿಯಿಂದ ತೆಗೆದುಹಾಕಿದೆ. ಇದು ಬಿಜೆಪಿಯು ದಲಿತ ವಿರೋಧಿ, ಸಿಖ್ ವಿರೋಧಿ ಪಕ್ಷ ಎಂದು ತೋರಿಸುತ್ತದೆ", ಎಂದು ಅವರು ಹೇಳಿದ್ದಾರೆ.
INSULTING
— AAP (@AamAadmiParty) February 24, 2025
BJP removes the photos of Shaheed Bhagat Singh and Baba Saheb Ambedkar from the CM office and replaces them with PM Modi's photo.
This is a big insult to our freedom fighters‼️ pic.twitter.com/7CPdgVBLbu