ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕ ಪಿ.ಸಿ. ಜಾರ್ಜ್ ಗೆ ಜಾಮೀನು ಮಂಜೂರು

ಪಿ.ಸಿ.ಜಾರ್ಜ್ (PTI)
ಕೊಟ್ಟಾಯಂ: ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ನಾಯಕ ಪಿ.ಸಿ.ಜಾರ್ಜ್ ಅವರಿಗೆ ಇಲ್ಲಿನ ನ್ಯಾಯಾಲಯವೊಂದು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಸೋಮವಾರ ತನ್ನೆದುರು ಶರಣಾಗಿ, ಅದೇ ದಿನ ಪೊಲೀಸರ ವಶಕ್ಕೆ ಒಪ್ಪಿಸಲ್ಪಟ್ಟಿದ್ದ ಪಿ.ಸಿ.ಜಾರ್ಜ್ ಅವರಿಗೆ ಎರಾಟ್ಟುಪೆಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ ನಂತರ, ಪಿ.ಸಿ. ಜಾರ್ಜ್ ನ್ಯಾಯಾಲಯದೆದುರು ಶರಣಾಗಿದ್ದರು.
ಇದಕ್ಕೂ ಮುನ್ನ, ಪಿ.ಸಿ. ಜಾರ್ಜ್ ರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಕೇರಳ ಹೈಕೋರ್ಟ್, ಇಂತಹ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವುದರಿಂದ, ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಅಭಿಪ್ರಾಯಪಟ್ಟಿತ್ತು.
ಟಿವಿ ವಾಹಿನಿಯೊಂದರ ಚರ್ಚೆಯ ವೇಳೆ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪವನ್ನು ಮಾಜಿ ಶಾಸಕರಾದ ಪಿ.ಸಿ.ಜಾರ್ಜ್ ಎದುರಿಸುತ್ತಿದ್ದಾರೆ.
Next Story