ಸಿಎಂ ಹುದ್ದೆಗೆ ಫಡ್ನವೀಸ್ ಹೆಸರು ಅಂತಿಮ : ಹಿರಿಯ ಬಿಜೆಪಿ ನಾಯಕ
ದೇವೇಂದ್ರ ಫಡ್ನವೀಸ್ | PC : PTI
ಮುಂಬೈ : ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹಿರಿಯ ಬಿಜೆಪಿ ನಾಯಕರೋರ್ವರು ರವಿವಾರ ರಾತ್ರಿ ಸುದ್ದಿಸಂಸ್ಥೆಗೆ ತಿಳಿಸಿದರು.
ತನ್ನ ಗುರುತನ್ನು ಗೌಪ್ಯವಾಗಿರಿಸುವಂತೆ ಕೋರಿದ ಅವರು, ಡಿ.2 ಅಥವಾ 3ರಂದು ಬಿಜೆಪಿ ಶಾಸಕಾಂಗ ಪಕ್ಷವು ಸಭೆ ಸೇರಲಿದೆ. ಡಿ.5ರಂದು ನೂತನ ಮಹಾಯುತಿ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಫಡ್ನವೀಸ್ ಎರಡು ಸಲ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಎರಡನೇ ಅವಧಿಯು ಕೆಲವೇ ದಿನಗಳದ್ದಾಗಿತ್ತು. ನಿರ್ಗಮಿತ ಏಕನಾಥ ಶಿಂದೆ ಸರಕಾರದಲ್ಲಿ ಅವರು ಉಪಮುಖ್ಯಮಂತ್ರಿಯಾಗಿದ್ದರು.
288 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ 230 ಸ್ಥಾನಗಳನ್ನು ಮಹಾಯುತಿ ಗೆದ್ದಿದೆ.
Next Story