ಕೇರಳದಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಬಿಜೆಪಿ: ತ್ರಿಶೂರಿನಲ್ಲಿ ಸುರೇಶ್ ಗೋಪಿಗೆ ಗೆಲುವು
ಸುರೇಶ್ ಗೋಪಿ | PTI
ತ್ರಿಶೂರು: ಲೋಕಸಭಾ ಚುನಾವಣೆಯಲ್ಲಿ ಕೇರಳ ಮೊದಲ ಬಾರಿಗೆ ಖಾತೆ ತೆರೆದಿದೆ. ಬಿಜೆಪಿ ಅಭ್ಯರ್ಥಿ, ಖ್ಯಾತ ಚಲನಚಿತ್ರ ನಟ ಸುರೇಶ್ ಗೋಪಿ ತ್ರಿಶೂರು ಕ್ಷೇತ್ರದಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಅವರು ತಮ್ಮ ಸಮೀಪದ ಸ್ಪರ್ಧಿ ಸಿಪಿಐನ ಸುನೀಲ್ ಕುಮಾರ್ ಅವರನ್ನು 70 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಸುರೇಶ್ ಗೋಪಿ ಅವರು 2019ರ ಲೋಕಸಭಾ ಚುನಾವಣೆಗೂ ತ್ರಿಶೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರ ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು.
ಕೇರಳದಲ್ಲಿ ಬಿಜೆಪಿಯು ಹಿಂದೆಂದೂ ಯಾವುದೇ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. 2021ರ ವಿಧಾನಸಭಾ ಚುನಾವಣೆಯಲ್ಲಿಯೂ ಸುರೇಶ್ ಗೋಪಿ ಸ್ಪರ್ಧಿಸಿದ್ದರೂ, ಅವರಿಗೆ ಗೆಲುವು ಸಾಧ್ಯವಾಗಿರಲಿಲ್ಲ.
ಮಾಜಿ ರಾಜ್ಯಸಭಾ ಸದಸ್ಯರೂ ಆದ ಸುರೇಶ್ ಗೋಪಿ ಕಳೆದ ಕೆಲವು ವರ್ಷಗಳಿಂದ ತ್ರಿಶೂರು ಕ್ಷೇತ್ರದಲ್ಲಿ ರಾಜಕೀಯವಾಗಿ ಸಕ್ರಿಯವಾಗಿದ್ದರು. ಕ್ರೈಸ್ತ ಮತದಾರರನ್ನು ಒಲೈಸುವ ಸಲುವಾಗಿ ಇತ್ತೀಚೆಗೆ ತನ್ನ ಕ್ಷೇತ್ರದ ಪ್ರಸಿದ್ಧ ಚರ್ಚ್ಗೆ ಚಿನ್ನದ ಕಿರೀಟವೊಂದನ್ನು ಸಮರ್ಪಿಸಿದ್ದರು.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಅವರ ಪುತ್ರ ಕೆ. ಮುರಳೀಧರನ್ ಅವರು ದಯನೀಯ ಸೋಲುಕಂಡಿದ್ದು ಮೂರನೇ ಸ್ಥಾನಕ್ಕೆ ಜಾರಿದ್ದಾರೆ.
2016ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಓ. ರಾಜಗೋಪಾಲ್ ಗೆಲುವು ಸಾಧಿಸಿದ್ದರು. ಆ ಕ್ಷ್ಶದ ಅಭ್ಯರ್ಥಿ ಓ. ರಾಜಗೋಪಾಲ್ ಅವರು ತಿರುವನಂತಪುರದ ನೇಮಂಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ 2021ರ ವಿಧಾನಸಭಾ ಚುಆವಣೆಯಲ್ಲಿ ಆ ಸ್ತಾನವನ್ನು ಬಿಜೆಪಿ ಕಳೆದುಕೊಂಡಿತ್ತು.
ಆದರೆ ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೆಲವು ಹಂತಗಳವರೆಗೂ ಮುನ್ನಡೆ ಸಾಧಿಸಿದ್ಜರೂ, ಅಂತಿಮ ಸುತ್ತಿನಲ್ಲಿ ಕಾಂಗ್ರೆಸ್ನ ಶಶಿಥರೂರ್ ಎದುರು 16, 077ಮತಗಳ ಅಂತರದಿಂದ ಸೋಲುಂಡಿದ್ದಾರೆ.