ಸಂವಿಧಾನದ ನಾಶ, ಮೀಸಲಾತಿ ರದ್ದತಿಯನ್ನು ಬಿಜೆಪಿ ಬಯಸುತ್ತಿದೆ: ರಾಹುಲ್
ರಾಹುಲ್ ಗಾಂಧಿ | PC : PTI
ಬೊಲಂಗೀರ್:ಸಂವಿಧಾನವನ್ನು ನಾಶಪಡಿಸಲು ಹಾಗೂ ಬುಡಕಟ್ಟು ಜನರು, ದಲಿತರು ಮತು ಹಿಂದುಳಿದ ವರ್ಗದವರ ಮೀಸಲಾತಿ ರದ್ದುಪಡಿಸಲು ಬಿಜೆಪಿ ಬಯಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಒಡಿಶಾದ ಬೊಲಂಗೀರ್ನಲ್ಲಿ ಚುನಾವಣಾ ಪ್ರಚಾರ ರ್ಯಾ ಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿಯು ಚುನಾವಣೆಯನ್ನು ಗೆದ್ದಲ್ಲಿ ಅದು ಸಾರ್ವಜನಿಕರಂಗವನ್ನು ಖಾಸಗೀಕರಣಗೊಳಿಸಲಿದೆ. ಈ ದೇಶವು 22 ಮಂದಿ ಬಿಲಿಯಾಧೀಶರಿಂದ ಆಳಲ್ಪಡಲಿದೆ ಎಂದು ಅವರು ಹೇಳಿದ್ದಾರೆ.
ತನ್ನ ಕೈಯಲ್ಲಿದ್ದ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸಿದ ಅವರು, ‘‘ ಬಿಜೆಪಿಯು ಈ ಪುಸ್ತಕವನ್ನು ಹರಿದುಹಾಕಲಿದೆ. ಆದರೆ ಕಾಂಗ್ರೆಸ್ ಹಾಗೂ ಭಾರದ ಜನತೆ ಅದಕ್ಕೆ ಅವಕಾಶ ನೀಡುವುದಿಲ್ಲ’’, ಎಂದು ಹೇಳಿದರು.
‘‘ ಒಂದು ವೇಳೆ ಬಿಜೆಪಿ ಜಯಗಳಿಸಿದಲ್ಲಿ, ಮೀಸಲಾತಿಯು ರದ್ದಾಗಲಿದೆ. ಸಾರ್ವಜನಿಕ ವಲಯವು ಖಾಸಗೀಕರಣಗೊಳ್ಳಲಿದೆ. ಹೀಗಾಗಿ ಜನತೆಯ ಸರಕಾರ ರಚನೆಯಾಗಬೇಕಾಗಿದೆ’’ ಎಂದು ರಾಹುಲ್ ಹೇಳಿದರು.
Next Story