ನಮ್ಮ ಯುವಕರು ಒದ್ದಾಡುತ್ತಿರಬೇಕಾದರೆ ಬಿಜೆಪಿ ಪಾಕಿಸ್ತಾನಿಗಳಿಗೆ ಉದ್ಯೋಗ ನೀಡ ಹೊರಟಿದೆ: ಸಿಎಎ ಕುರಿತು ಅರವಿಂದ್ ಕೇಜ್ರಿವಾಲ್ ವಾಗ್ದಾಳಿ
ಅರವಿಂದ್ ಕೇಜ್ರಿವಾಲ್ (PTI)
ಹೊಸದಿಲ್ಲಿ: ನಮ್ಮ ದೇಶದ ಯುವಕರು ಉದ್ಯೋಗಕ್ಕಾಗಿ ಒದ್ದಾಡುತ್ತಿರಬೇಕಾದರೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಪಾಕಿಸ್ತಾನದ ಯುವಕರಿಗೆ ಉದ್ಯೋಗ ನೀಡಲು ಹೊರಟಿದೆ ಎಂದು ಬುಧವಾರ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳ ಅಧಿಸೂಚನೆ ಹೊರ ಬಿದ್ದ ನಂತರ, ಅವರು ಪ್ರತಿಕ್ರಿಯಿಸುತ್ತಿದ್ದರು.
ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ಇಂದು ಭಾರತವನ್ನು ಬಾಧಿಸುತ್ತಿರುವ ಬಹದೊಡ್ಡ ಪಿಡುಗು ಹಣದುಬ್ಬರ ಮತ್ತು ನಿರುದ್ಯೋಗ. ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಬದಲು ಕೇಂದ್ರ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಮಾತನಾಡುತ್ತಿದೆ” ಎಂದು ಟೀಕಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯು ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಆಗಮಿಸಿರುವ ಮುಸ್ಲಿಮೇತರ ಸಮುದಾಯಗಳಿಗೆ ತ್ವರಿತವಾಗಿ ಪೌರತ್ವವನ್ನು ಒದಗಿಸುವ ಉದ್ದೇಶ ಹೊಂದಿದೆ. ಡಿಸೆಂಬರ್ 31, 2014ರ ನಂತರ ಭಾರತದಲ್ಲಿ ಕನಿಷ್ಠ ಪಕ್ಷ ಆರು ವರ್ಷಗಳಿಂದ ವಾಸಿಸುತ್ತಿರುವವರು ಭಾರತೀಯ ಪೌರತ್ವ ಪಡೆಯಲು ಈ ಕಾಯ್ದೆಯಡಿ ಅರ್ಹರಾಗಲಿದ್ದಾರೆ.