ಜಾರ್ಖಂಡ್ ನಲ್ಲಿ ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ‘ಇಂಡಿಯಾ’ದಿಂದ ವಿಫಲ: ರಾಹುಲ್ ಗಾಂಧಿ
ರಾಹುಲ್ ಗಾಂಧಿ | Photo ; PTI
ಪಾಕುರ್ (ಜಾರ್ಖಂಡ್): ಜನರಿಂದ ಚುನಾಯಿತ ಜಾರ್ಖಂಡ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ ಇಂಡಿಯಾ ಮೈತ್ರಿಕೂಟ ಅದರ ವಿರುದ್ಧ ಸೆಟೆದು ನಿಂತಿತ್ತು ಮತ್ತು ಅದು ಜನಾದೇಶವನ್ನು ಕದಿಯಲು ಬಿಡಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಇಲ್ಲಿ ಹೇಳಿದರು.
ಜಾಖಂಡನ್ನು ಪ್ರವೇಶಿಸಿದ ರಾಹುಲ್ ಯಾತ್ರೆಯನ್ನು ಇಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಗಿದ್ದು, ನೂತನ ಮುಖ್ಯಮಂತ್ರಿ ಚಂಪಾಯಿ ಸೊರೇನ್ ಅವರೂ ಉಪಸ್ಥಿತರಿದ್ದರು.
ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ‘ಬಿಜೆಪಿಯ ಬಳಿ ಹಣಬಲ ಮತ್ತು ತನಿಖಾ ಸಂಸ್ಥೆಗಳಿವೆ. ಆದರೆ ನಾನು ಮತ್ತು ಕಾಂಗ್ರೆಸ್ ಇದಕ್ಕೆ ಹೆದರುವುದಿಲ್ಲ. ಅದರ ವಿಭಜಕ ಸಿದ್ಧಾಂತದ ವಿರುದ್ಧ ಹೋರಾಡುತ್ತಲೇ ಇರುತ್ತೇವೆ’ ಎಂದು ಹೇಳಿದರು.
ತನ್ನ ಹಿಂದಿನ ಭಾರತ ಜೋಡೊ ಯಾತ್ರೆಯು ಆರೆಸ್ಸೆಸ್ ಮತ್ತು ಬಿಜೆಪಿಯ ವಿಭಜಕ ಕಾರ್ಯಸೂಚಿಯ ವಿರುದ್ಧವಾಗಿತ್ತು. ಪ್ರಸ್ತುತ ಯಾತ್ರೆಯು ದೇಶದ ಜನರಿಗಾಗಿ ನ್ಯಾಯವನ್ನು ಕೇಳುತ್ತಿದೆ ಎಂದರು.
Next Story