ಕೇರಳ: 46 ಗಂಟೆಗಳ ಬಳಿಕ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಪೌರ ಕಾರ್ಮಿಕನ ಮೃತದೇಹ ಪತ್ತೆ

PC : newindianexpress.com
ತಿರುವನಂತಪುರಂ: ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ 42 ವರ್ಷದ ಪೌರ ಕಾರ್ಮಿಕ ಜಾಯ್ ಎಂಬವರ ಮೃತದೇಹವನ್ನು ಅವರು ನಾಪತ್ತೆಯಾದ 46 ಗಂಟೆಗಳ ನಂತರ ಸೋಮವಾರ ಪತ್ತೆಯಾಗಿದೆ.
ಜಾಯ್ ನಾಪತ್ತೆಯಾಗಿದ್ದ ಸ್ಥಳದಿಂದ ಸುಮಾರು ಒಂದು ಕಿಮೀ ದೂರದಲ್ಲಿರುವ ತಕರಪ್ಪರಂಬು ಬಳಿ ಇರುವ ಶ್ರೀ ಚಿತ್ರ ಹೋಮ್ ಹಿಂಬದಿಯ ಕಾಲುವೆಯಲ್ಲಿ ಜಾಯ್ ಮೃತದೇಹವನ್ನು ಪತ್ತೆ ಹಚ್ಚಲಾಗಿದೆ.
ಸೆಂಟ್ರಲ್ ರೈಲ್ವೆ ನಿಲ್ದಾಣದ ಕೆಳಗೆ ಹರಿಯುವ ನಾಲೆ ಮಾರ್ಗದಲ್ಲಿ ಜಾಯ್ ಸಿಲುಕಿಕೊಂಡಿದ್ದರು.
ಜಾಯ್ ಅನ್ನು ಪತ್ತೆ ಹಚ್ಚುವ ಪ್ರಯತ್ನಗಳು ವಿಫಲಗೊಂಡ ನಂತರ, ರವಿವಾರ ರಾತ್ರಿ ನೌಕಾಪಡೆಯ ಆರು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದರು. ಮೃತದೇಹವನ್ನು ಪತ್ತೆ ಹಚ್ಚಲಾಗಿದೆ ಎಂಬ ಮಾಹಿತಿ ಬಂದ ಸೋಮವಾರ ಬೆಳಗ್ಗೆ ಅವರು ಶೋಧನಾ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು.
ರೈಲ್ವೆ ನಿಲ್ದಾಣದ ಕೆಳಗೆ ಹರಿಯುವ ನಾಲೆಯನ್ನು ಸ್ವಚ್ಛಗೊಳಿಸಲು ಖಾಸಗಿ ಸಂಸ್ಥೆಯೊಂದು ನೇಮಕ ಮಾಡಿಕೊಂಡಿದ್ದ ಗುತ್ತಿಗೆ ನೌಕರರ ತಂಡದ ಸದಸ್ಯರಾಗಿ ಜಾಯ್ ಕಾರ್ಯನಿರ್ವಹಿಸುತ್ತಿದ್ದರು. ಇಲ್ಲಿನ ಮರಯಿಮುತ್ತುಮ್ ನಿವಾಸಿಯಾದ ಜಾಯ್, ತಮ್ಮ ತಾಯಿ ಮೆಲ್ಹಿಯನ್ನು ಅಗಲಿದ್ದಾರೆ.