ಮುಂದುವರಿದ ಹುಸಿ ಬಾಂಬ್ ಕರೆ | ಶನಿವಾರ 30 ವಿಮಾನಗಳಿಗೆ ಬೆದರಿಕೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ಕಳೆದ ಒಂದು ವಾರದಿಂದ ನಿರಂತರವಾಗಿ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿದೆ. ಶನಿವಾರವೂ ಸುಮಾರು 30 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಹುಸಿ ಬೆದರಿಕೆ ಸಂದೇಶಗಳು ಭದ್ರತೆ ಬಗ್ಗೆ ಆತಂಕ ಮೂಡಿಸುವುದರ ಜೊತೆಗೆ ವಿಮಾನ ಹಾರಾಟವನ್ನು ಅಸ್ತವ್ಯಸ್ಥಗೊಳಿಸಿದೆ ಎಂದು ವರದಿಯಾಗಿದೆ.
ಶನಿವಾರ ಬಂದಿರುವ ಬೆದರಿಕೆ ಸಂದೇಶಗಳು ಕೂಡ ಕಳೆದ ಸೋಮವಾರದಿಂದ ಬರುತ್ತಿದ್ದ ಬೆದರಿಕೆ ಸಂದೇಶಗಳಂತೆಯೇ ಇದ್ದವು. ಬೆದರಿಕೆ ಕರೆಗಳು ಕಳೆದ ಒಂದು ವಾರದಿಂದ ಕನಿಷ್ಠ 60 ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ.
ಶನಿವಾರ ಏರ್ ಇಂಡಿಯಾ, ಇಂಡಿಗೋ, ಆಕಾಶ ಏರ್, ವಿಸ್ತಾರಾ, ಸ್ಪೈಸ್ ಜೆಟ್, ಸ್ಟಾರ್ ಏರ್ ಮತ್ತು ಅಲಯನ್ಸ್ ಏರ್ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ ಎಂದು ಮೂಲಗಳು ತಿಳಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಗೋ, ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಯು ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದೆ.
ಉದಯಪುರ-ಮುಂಬೈ ವಿಮಾನವು ಲ್ಯಾಂಡಿಂಗ್ ಗೆ ಸ್ವಲ್ಪ ಮೊದಲು ಬೆದರಿಕೆ ಕರೆ ಸ್ವೀಕರಿಸಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿ ವಿಮಾನವನ್ನು ತಪಾಸಣೆ ನಡೆಸಲಾಗಿದೆ ಎಂದು ವಿಸ್ತಾರಾ ಏರ್ ವೇಸ್ ತಿಳಿಸಿದೆ.
ಸೌಜನ್ಯ : deccanherald.com