ನ್ಯಾಯ ಯಾತ್ರೆಗೆ ಬಿಡುವು: ರವಿವಾರದಿಂದ ಪಶ್ಚಿಮ ಬಂಗಾಳದಲ್ಲಿ ಪುನಾರಂಭ
ರಾಹುಲ್ ಗಾಂಧಿ | Photo: PTI
ಹೊಸದಿ: ಹನ್ನೆರಡು ದಿನಗಳ ಕಾಲ ನಿರಂತರವಾಗಿ ನಡೆದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯು ಗುರುವಾರದಿಂದ ಮೂರು ದಿನಗಳ ಬಿಡುವು ತೆಗೆದುಕೊಂಡಿದೆ. ಜನವರಿ 28ರಿಂದ ಅದು ತನ್ನ ಪಾದಯಾತ್ರೆಯನ್ನು ಪಶ್ಚಿಮ ಬಂಗಾಳದ ಜಲಪಾಯಿಗುರಿಯಿಂದ ಪುನಾರಂಭಿಸಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಜೈರಾಮ್ ರಮೇಶ್ ಶುಕ್ರವಾರ ತಿಳಿಸಿದ್ದಾರೆ.
‘‘ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಅರುಣಾಚಲಪ್ರದೇಶ, ಮೇಘಾಲಯ ಹಾಗೂ ಪಶ್ಚಿಮಬಂಗಾಳದ ಕೂಚ್ ಬಿಹಾರದಲ್ಲಿ ಸತತವಾಗಿ 12 ದಿನಳ ಕಾಲ ಭಾರತ್ ಜೋಡೋ ನ್ಯಾಯ ಯಾತ್ರೆ ಜನವರಿ 25ರ ಮಧ್ಯಾಹ್ನದಿಂದ ಪೂರ್ವಯೋಜಿತ ಬಿಡುವನ್ನು ಪಡೆದು ಕೊಂಡಿದೆ. ಯಾತ್ರೆಯು ಜನವರಿ 28ರ ಮಧ್ಯಾಹ್ನ 2:00 ಗಂಟೆಗೆ ಜಲಾಪಾಯಿಗುರಿಯಿಂದ ಪುನಾರಂಭಗೊಳ್ಳಲಿದೆ. ತರುವಾಯ ಸಿಲಿಗುರಿಗೆ ಪಾದಯಾತ್ರೆ ನಡೆಯಲಿದ್ದು, ಅಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ರಾಹುಲ್ ಗಾಂಧಿ ಅವರು ಮಾತನಾಡಲಿದ್ದಾರೆಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಭಾರತ್ ನ್ಯಾಯ ಜೋಡೋ ಯಾತ್ರೆ ಗುರುವಾರ ಕೂಚ್ಬಿಹಾರ ಮೂಲಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದೆ. ಪಶ್ಚಿಮಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ ಅವರು ಯಾತ್ರಾವನ್ನು ಸ್ವಾಗತಿಸಿದರು.