ಬಿಡಬ್ಲ್ಯುಎಫ್ ರ್ಯಾಂಕಿಂಗ್ | ನಂ.1 ಸ್ಥಾನ ಕಳೆದುಕೊಂಡ ಸಾತ್ವಿಕ್-ಚಿರಾಗ್
ಸಾತ್ವಿಕ್-ಚಿರಾಗ್ | PC : PTI
ಹೊಸದಿಲ್ಲಿ: ಭಾರತದ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮಂಗಳವಾರ ಬಿಡುಗಡೆಯಾಗಿರುವ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್(ಬಿಡಬ್ಲ್ಯುಎಫ್)ರ್ಯಾಂ ಕಿಂಗ್ನಲ್ಲಿ ಅಗ್ರ ಸ್ಥಾನ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕಳೆದ ವಾರ ನಡೆದ ಇಂಡೋನೇಶ್ಯ ಓಪನ್ ಟೂರ್ನಿಯಿಂದ ಸಾತ್ವಿಕ್ ಹಾಗೂ ಚಿರಾಗ್ ಹಿಂದೆ ಸರಿದಿದ್ದರು. ಈ ಜೋಡಿ ಇಂಡೋನೇಶ್ಯ ಓಪನ್ನಲ್ಲಿ ಹಾಲಿ ಡಬಲ್ಸ್ ಚಾಂಪಿಯನ್ ಆಗಿತ್ತು.
ಚೀನಾದ ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ್ ಚಾಂಗ್ ಪುರುಷರ ಡಬಲ್ಸ್ ರ್ಯಾಂ ಕಿಂಗ್ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಎರಡು ಸ್ಥಾನ ಭಡ್ತಿ ಪಡೆದಿರುವ ಡೆನ್ಮಾರ್ಕ್ನ ಕಿಮ್ ಅಸ್ತ್ರುಪ್ ಹಾಗೂ ಆ್ಯಂಡರ್ಸ್ ಸ್ಕಾರಪ್ ಎರಡನೇ ಸ್ಥಾನ ತಲುಪಿದ್ದಾರೆ.
ಮೇನಲ್ಲಿ ಥಾಯ್ಲೆಂಡ್ ಓಪನ್ನಲ್ಲಿ ಜಯಶಾಲಿಯಾದ ನಂತರ ಚಿರಾಗ್-ಸಾತ್ವಿಕ್ ಜೋಡಿ ನಂ.1 ರ್ಯಾಂ ಕಿಂಗನ್ನು ವಶಪಡಿಸಿಕೊಂಡಿದ್ದರು. ಕಳೆದ ತಿಂಗಳು ಸಿಂಗಾಪುರ ಓಪನ್ನಲ್ಲಿ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ ನಂತರ ಕಳಪೆ ಫಾರ್ಮ್ನಲ್ಲಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ಎಚ್.ಎಸ್.ಪ್ರಣಯ್ ಹಾಗೂ ಲಕ್ಷ್ಯ ಸೇನ್ ಅಗ್ರ-15ರಲ್ಲಿ ಸ್ಥಾನ ಪಡೆದಿದ್ದು ಕ್ರಮವಾಗಿ 10ನೇ ಹಾಗೂ 14ನೇ ಸ್ಥಾನದಲ್ಲಿದ್ದಾರೆ. ಕಿಡಂಬಿ ಶ್ರೀಕಾಂತ್ 4 ಸ್ಥಾನ ಕಳೆದುಕೊಂಡು 32ನೇ ರ್ಯಾಂ ಕಿನಲ್ಲಿದ್ದಾರೆ. ಪ್ರಿಯಾಂಶು ರಾಜಾವತ್ 34ನೇ ಹಾಗೂ ಕಿರಣ್ ಜಾರ್ಜ್ 35ನೇ ಸ್ಥಾನದಲ್ಲಿದ್ದಾರೆ.
ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ರ್ಯಾಂ ಕಿಂಗ್ನಲ್ಲಿ 10ನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ಗೆ ತೆರಳಲಿರುವ ತನಿಶಾ ಕ್ರಾಸ್ಟೊ ಹಾಗೂ ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್ನಲ್ಲಿ ಒಂದು ಸ್ಥಾನ ಮೇಲಕ್ಕೇರಿ 19ನೇ ಸ್ಥಾನ ತಲುಪಿದ್ದಾರೆ. ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಕೂಡ ಒಂದು ಸ್ಥಾನ ಭಡ್ತಿ ಪಡೆದು 24ನೇ ರ್ಯಾಂ ಕಿಗೆ ತಲುಪಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ಜಯಿಸಿರುವ ಟ್ರೀಸಾ ಹಾಗೂ ಗಾಯತ್ರಿ ಇಂಡೋನೇಶ್ಯ ಓಪನ್ನಲ್ಲಿ ಅಂತಿಮ-16ರ ಸುತ್ತಿನಿಂದ ನಿರ್ಗಮಿಸಿದ್ದಾರೆ.