ಟಿಕೆಟ್ ರದ್ದತಿ | ನಾಲ್ಕೇ ವರ್ಷಗಳಲ್ಲಿ 6,112 ಕೋಟಿ ರೂ. ಆದಾಯ ಗಳಿಸಿದ ರೈಲ್ವೆ!
ಆರ್ಟಿಐ ಅರ್ಜಿಯಲ್ಲಿ ಬಹಿರಂಗ
ಸಾಂದರ್ಭಿಕ ಚಿತ್ರ
ರಾಯಪುರ(ಛತ್ತೀಸ್ಗಡ): ಟಿಕೆಟ್ಗಳ ರದ್ದತಿಯಿಂದ ಭಾರತೀಯ ರೈಲ್ವೆಯು ಗಳಿಸುವ ಆದಾಯವೆಷ್ಟು ಎಂದು ಊಹಿಸಬಲ್ಲಿರಾ? 2019-20 ಮತ್ತು 2022-23ರ ನಡುವೆ ನಾಲ್ಕು ವರ್ಷಗಳಲ್ಲಿ ರೈಲ್ವೆಯು ಟಿಕೆಟ್ಗಳ ರದ್ದತಿಯಿಂದ 6,112 ಕೋಟಿ ರೂ.ಗಳ ಭಾರೀ ಆದಾಯವನ್ನು ಗಳಿಸಿದೆ. ಆದಾಗ್ಯೂ, ಇದು ಸಣ್ಣ ಮೊತ್ತವಾಗಿದೆ ಮತ್ತು ಭಾರತೀಯ ರೈಲ್ವೆಯ ಆದಾಯದ ಭಾಗವಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ಹೇಳಿದರು.
ರಾಯಪುರದ ಸಾಮಾಜಿಕ ಕಾರ್ಯಕರ್ತ ಕುನಾಲ ಶುಕ್ಲಾ ಅವರು ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ರೈಲ್ವೆ ಸಚಿವಾಲಯವು ಟಿಕೆಟ್ಗಳ ರದ್ದತಿಗಳಲ್ಲಿ ಕಡಿತಗೊಳಿಸಿದ ವರ್ಷವಾರು ಮೊತ್ತಗಳನ್ನು ಬಹಿರಂಗಗೊಳಿಸಿದೆ.
ಟಿಕೆಟ್ ರದ್ದತಿಯಿಂದ ಸಂಗ್ರಹಗೊಂಡ ಸಂಪೂರ್ಣ ಹಣ ಐಆರ್ಸಿಟಿಸಿಗೆ ಹೋಗುತ್ತದೆ. ಟಿಕೆಟ್ಗಳನ್ನು ರದ್ದುಗೊಳಿಸಿದಾಗ ಕನಿಷ್ಠ ಕ್ಲರಿಕಲ್ ವೆಚ್ಚವನ್ನು ಕಡಿತಗೊಳಿಸಲಾಗುತ್ತದೆ. ದೇಶದಲ್ಲಿ ಪ್ರತಿದಿನ 70ರಿಂದ 80 ಲಕ್ಷ ಟಿಕೆಟ್ಗಳನ್ನು ಬುಕ್ ಮಾಡಲಾಗುತ್ತದೆ,ಇದಕ್ಕೆ ಹೋಲಿಸಿದರೆ ಟಿಕೆಟ್ ರದ್ದತಿಯಿಂದ ಸಂಗ್ರಹಗೊಂಡ ಮೊತ್ತ ದೊಡ್ಡದೇನಲ್ಲ ಎಂದು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಕಾಸ್ ಕಶ್ಯಪ್ ತಿಳಿಸಿದರು.