ಶಿಕ್ಷಕಿ ಮಾತು ಕೇಳಿ ಸಹಪಾಠಿಗೆ ಹಲ್ಲೆ ಪ್ರಕರಣ: ಮುಸ್ಲಿಂ ವಿದ್ಯಾರ್ಥಿಯನ್ನು ಆಲಿಂಗಿಸಿದ ಹಿಂದೂ ವಿದ್ಯಾರ್ಥಿ
ವ್ಯಾಪಕ ಪ್ರಶಂಸೆಗೆ ಒಳಗಾದ ರೈತ ಮುಖಂಡರ ನಡೆ; ವಿಡಿಯೋ ವೈರಲ್
Screengrab: Twitter
ಮುಝಫ್ಫರ್ನಗರ: ಮುಸ್ಲಿಂ ಬಾಲಕನಿಗೆ ಹಿಂದೂ ಸಹಪಾಠಿಗಳಿಂದ ಹಲ್ಲೆ ಮಾಡಿಸಿದ ಶಿಕ್ಷಕಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ನರೇಶ್ ಟಿಕಾಯಿತ್ ರಂಗಪ್ರವೇಶ ಮಾಡಿದ್ದು, ಘಟನೆ ನಡೆದ ಖುಬ್ಬಾಪುರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ವಿದ್ಯಾರ್ಥಿಯ ಕುಟುಂಬಸ್ಥರನ್ನು ಭೇಟಿ ಮಾಡಿದರು.
ಘಟನೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿದ ನರೇಶ್ ಟಿಕಾಯತ್, ‘ಪರಸ್ಪರ ಪ್ರೀತಿಯ ವಾತಾವರಣ ಕೆಡಲು ಬಿಡುವುದಿಲ್ಲ. ಆರೋಪಿ ಶಿಕ್ಷಕ ಮತ್ತು ಶಾಲೆಯ ವಿರುದ್ಧ ಕ್ರಮ ಕೈಗೊಳ್ಳದ ಆಡಳಿತವು ಕೋಮಾದಲ್ಲಿದೆʼ ಎಂದು ಹೇಳಿದರು.
ಆ ಬಳಿಕ ಕೆನ್ನೆಗೆ ಹೊಡೆದಿದ್ದ ಹಿಂದೂ ವಿದ್ಯಾರ್ಥಿ ಮತ್ತು ಪೆಟ್ಟು ತಿಂದಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ಪರಸ್ಪರ ಆಲಿಂಗಿಸುವಂತೆ ಸೂಚಿಸಿದರು. ಆ ಮೂಲಕ ಗ್ರಾಮದಲ್ಲಿ ಈ ವಿಚಾರವಾಗಿ ಯಾವುದೇ ಮನಸ್ತಾಪ ಮುಂದುವರೆಯದಂತೆ ನರೇಶ್ ಟೀಕಾಯತ್ ಶ್ರಮಿಸಿದ್ದಾರೆ.
ಮಕ್ಕಳಿಬ್ಬರು ಅಪ್ಪಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರೈತ ಮುಖಂಡರ ಈ ನಡೆಯು ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.
Bhartiya Kisan Union leader Naresh Tikait met the victim student's family and the accused teacher in Muzaffarnagar. What happened was wrong and should not be repeated, said Tikait. According to him, a compromise has been struck. On the FIR, he says that he will get it expunged. pic.twitter.com/GXIPlrMrVJ
— Piyush Rai (@Benarasiyaa) August 26, 2023
बच्चों का गले मिलना एक सकारात्मक संदेश है क्योंकि प्रेम का पाठ पढ़ाने से ही सच्चा हिंदुस्तान बरक़रार रहेगा।
— Akhilesh Yadav (@yadavakhilesh) August 26, 2023
अब इससे एक क़दम आगे बढ़कर मेलमिलाप करानेवालों को उस शिक्षिका से बच्चे के पिता को राखी भी बँधवानी चाहिए क्योंकि समस्या की असली जड़ बच्चों के बीच दुराव की नहीं है बल्कि उस… pic.twitter.com/kQOHtyiZhC