ಐಐಟಿ ದಿಲ್ಲಿಯ ಸಾಮಾನ್ಯ ವರ್ಗದ ಅರ್ಧದಷ್ಟು ವಿದ್ಯಾರ್ಥಿಗಳಿಂದ ಜಾತಿವಾದಿ ಹೇಳಿಕೆ: ಸಮೀಕ್ಷೆ
ಐಐಟಿ ದಿಲ್ಲಿ | Photo: PTI
ಹೊಸದಿಲ್ಲಿ: ಐಐಟಿ ದಿಲ್ಲಿಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಧದಷ್ಟು ವಿದ್ಯಾರ್ಥಿಗಳು ತಾವು ಉದ್ದೇಶಪೂರ್ವಕ ಅಥವಾ ಉದ್ದೇಶಪೂರ್ವಕವಲ್ಲದೆ ಜಾತಿವಾದಿ ಹೇಳಿಕೆ ನೀಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು 2019-20ರಲ್ಲಿ ನಡೆಸಲಾದ ಸಮೀಕ್ಷೆ ತಿಳಿಸಿದೆ.
ಕ್ಯಾಂಪಸ್ ನಲ್ಲಿ ಕಳೆದ ಮೂರು ತಿಂಗಳಲ್ಲಿ ಇಬ್ಬರು ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಂಸ್ಥೆಯ ಅಧಿಕೃತ ವಿದ್ಯಾರ್ಥಿ ಪ್ರಕಾಶನ ಬೋರ್ಡ್ ಆಫ್ ಸ್ಟೂಡೆಂಟ್ಸ್ ಪಬ್ಲಿಕೇಶನ್ಸ್ ಈ ಸಮೀಕ್ಷೆಯನ್ನು ಪ್ರಸಾರ ಮಾಡಿದೆ.
ವಿತರಣೆ ಮಾಡುವ ಮುನ್ನ ಅಧಿಕೃತ ವಾಹಿನಿ ಮೂಲಕ ಪರಿಶೀಲನೆಗೆ ಒಳಪಟ್ಟಿಲ್ಲ ಎಂದು ಸಂಸ್ಥೆಯ ಎಸ್ಸಿ, ಎಸ್ಟಿ ಸೆಲ್ ಪ್ರತಿಪಾದಿಸಿರುವುದರಿಂದ ಈ ಸಮೀಕ್ಷೆಯನ್ನು ಸೆಪ್ಟಂಬರ್ ನಲ್ಲಿ ಹಿಂಪಡೆಯಲಾಗಿತ್ತು. ಈ ಸಮೀಕ್ಷೆಯನ್ನು ಮೂರು ವರ್ಷಗಳ ಹಿಂದೆ ನಡೆಸಿದರೂ ಫಲಿತಾಂಶವನ್ನು ಸಂಸ್ಥೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲು ಅವಕಾಶ ನೀಡಿಲ್ಲ. ಇದು ದಿಲ್ಲಿ ಕ್ಯಾಂಪಸ್ ನಲ್ಲಿ ಜಾತಿ ತಾರತಮ್ಯದ ಕಠೋರ ಚಿತ್ರಣವನ್ನು ನೀಡಿದೆ.