ನೀಟ್ ಹಗರಣ: ಜಾರ್ಖಂಡ್ನಲ್ಲಿ ಪತ್ರಕರ್ತನನ್ನು ಬಂಧಿಸಿದ ಸಿಬಿಐ
ಗುಜರಾತ್ನಲ್ಲಿ ಶೋಧ ಕಾರ್ಯಾಚರಣೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ನೀಟ್ ಹಗರಣದ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಜಾರ್ಖಂಡ್ನಿಂದ ಓರ್ವ ಪತ್ರಕರ್ತನನ್ನು ಸಿಬಿಐ ಬಂಧಿಸಿದೆ ಎಂದು ಶನಿವಾರ ಮೂಲಗಳು ತಿಳಿಸಿವೆ ಎಂದು indiatoday.in ವರದಿ ಮಾಡಿದೆ. ಬಂಧಿತ ಪತ್ರಕರ್ತನನ್ನು ಜಮಾಲುದ್ದೀನ್ ಎಂದು ಗುರುತಿಸಲಾಗಿದೆ. ಆತನನ್ನು ಜಾರ್ಖಂಡ್ನ ಹಝಾರಿಬಾಗ್ನಿಂದ ಬಂಧಿಸಲಾಗಿದೆ.
ಈ ನಡುವೆ ಗುಜರಾತ್ನ ಗೋಧ್ರಾ, ಖೇಡಾ, ಆನಂದ್ ಹಾಗೂ ಅಹಮದಾಬಾದ್ ಸೇರಿದಂತೆ ವಿವಿಧೆಡೆ ಸಿಬಿಐ ಶೋಧ ಕಾರ್ಯಾಚರಣೆ ಕೈಗೊಂಡಿದೆ.
ಜೂನ್ 27ರಂದು ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ಸಿಬಿಐ ಇಬ್ಬರು ಆರೋಪಿಗಳನ್ನು ಬಂಧಿಸಿತ್ತು. ಬಂಧಿತರನ್ನು ಮನೀಶ್ ಪ್ರಕಾಶ್ ಹಾಗೂ ಅಶುತೋಷ್ ಎಂದು ಗುರುತಿಸಲಾಗಿದೆ.
Next Story