ಅಮಿತ್ ಶಾ ಭಾಷಣ ಡಿಲಿಟ್ ಮಾಡಲು 'ಎಕ್ಸ್'ಗೆ ಸೂಚಿಸಿದ ಕೇಂದ್ರ ಸರ್ಕಾರ: ಕಾಂಗ್ರೆಸ್ ಆರೋಪ
ಅಮಿತ್ ಶಾ | PTI
ಹೊಸದಿಲ್ಲಿ: ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಾಡಿದ ಭಾಷಣವನ್ನು ಡಿಲಿಟ್ ಮಾಡುವಂತೆ ಬಿಜೆಪಿ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆ 'X' ಅನ್ನು ಕೇಳಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last evening, a bunch of us from Congress, our party's official handle, including myself, received a mail from X, formerly Twitter. This mail clearly indicates that the Ministry of Home Affairs and the IT Dept have written to them to take down the video of Home Minister Amit Shah… pic.twitter.com/AG2qGbyLeQ
— Congress (@INCIndia) December 19, 2024
ಕಾಂಗ್ರೆಸ್ನ ಹೇಳಿಕೆಗಳ ಬಗ್ಗೆ ಬಿಜೆಪಿ ಅಥವಾ ಎಕ್ಸ್ ಸಂಸ್ಥೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ.
ಅಮಿತ್ ಶಾ ಅವರು "ಕ್ಷಮಿಸಲಾಗದ ಅಪರಾಧ" ಎಸಗಿದ್ದಾರೆ ಎಂದು ಕಾಂಗ್ರೆಸ್ ಪುನರುಚ್ಚರಿಸಿದ್ದು, ಗೃಹ ಸಚಿವರು ರಾಷ್ಟ್ರದ ಕ್ಷಮೆಯಾಚಿಸಬೇಕು ಹಾಗೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
ಎಕ್ಸ್ ಖಾತೆಯಲ್ಲಿ ಹಂಚಲಾಗಿರುವ ಅಮಿತ್ ಶಾ ವರ ಭಾಷಣದ ತುಣುಕನ್ನು ಡಿಲಿಟ್ ಮಾಡುವಂತೆ ಕಾಂಗ್ರೆಸ್ ಪಕ್ಷದ ಅಧಿಕೃತ ಹ್ಯಾಂಡಲ್ಗೆ ಸೇರಿದಂತೆ ಪಕ್ಷದ ನಾಯಕರಿಗೆ ಎಕ್ಸ್ ಇಮೇಲ್ ಮಾಡಿದೆ ಎಂದು ಪಕ್ಷದ ವಕ್ತಾರೆ ಸುಪ್ರಿಯಾ ಸುಪ್ರಿಯಾ ಶ್ರಿನೇತ್ ಹೇಳಿದ್ದಾರೆ.