97 ತೇಜಸ್ ಎಲ್ಸಿಎ, 150 ಪ್ರಚಂಡ ಹೆಲಿಕಾಪ್ಟರ್ಗಳ ಖರೀದಿಗೆ ಕೇಂದ್ರ ಸರಕಾರದ ಅನುಮೋದನೆ
Photo: NDTV
ಹೊಸದಿಲ್ಲಿ: ಸಶಸ್ತ್ರ ಪಡೆಗಳ ಒಟ್ಟಾರೆ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚುವರಿಯಾಗಿ 97 ತೇಜಸ್ ಲಘು ಯುದ್ಧ ವಿಮಾನ (LCA)ಗಳು ಮತ್ತು ಸುಮಾರು 150 ಪ್ರಚಂಡ ಹೆಲಿಕಾಪ್ಟರ್ಗಳ ಖರೀದಿಗೆ ಕೇಂದ್ರ ಸರಕಾರವು ಗುರುವಾರ ಆರಂಭಿಕ ಅನುಮೋದನೆಯನ್ನು ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (DAC)ಯು ತನ್ನ ಎಸ್ಯು-30 ಯುದ್ಧವಿಮಾನಗಳನ್ನು ಮೇಲ್ದರ್ಜೆಗೇರಿಸುವ ಭಾರತೀಯ ವಾಯುಪಡೆಯ ಪ್ರಸ್ತಾವಕ್ಕೂ ಹಸಿರು ನಿಶಾನೆಯನ್ನು ತೋರಿಸಿದೆ ಎಂದು ಅವು ಹೇಳಿದವು.
ಬೃಹತ್ ಖರೀದಿ ಯೋಜನೆಗಳು ಮತ್ತು ಎಸ್ಯು-30 ಉನ್ನತೀಕರಣ ಕಾರ್ಯಕ್ರಮದಿಂದ ಸರಕಾರ ಬೊಕ್ಕಸಕ್ಕೆ 1.3 ಲ.ಕೋ.ರೂ.ವೆಚ್ಚವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ರಕ್ಷಣಾ ಸಚಿವಾಲಯವು ಡಿಎಸಿ ಅಂಗೀಕರಿಸಿರುವ ಯೋಜನೆಗಳ ವಿವರಗಳನ್ನು ಶೀಘ್ರವೇ ಒದಗಿಸುವ ನಿರೀಕ್ಷೆಯಿದೆ.
Next Story