ಗುಜರಾತ್ ಗೆ ಪ್ರವಾಹ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ | ವಯನಾಡ್ ಭೂಕುಸಿತ ಪೀಡಿತ ಕೇರಳಕ್ಕಿಲ್ಲ ಪರಿಹಾರ!
Photo : Manorama
ಹೊಸದಿಲ್ಲಿ : ಗುಜರಾತ್, ಮಣಿಪುರ ಮತ್ತು ತ್ರಿಪುರ ರಾಜ್ಯಗಳಿಗೆ ಕೇಂದ್ರ ಸರಕಾರವು ರೂ. 675 ಕೋಟಿ ಪ್ರವಾಹ ಪರಿಹಾರವನ್ನು ಮಂಜೂರು ಮಾಡಿದೆ. ರಾಜ್ಯ ವಿಕೋಪ ಸ್ಪಂದನೆ ನಿಧಿಯ ಕೇಂದ್ರದ ಪಾಲು ಹಾಗೂ ರಾಷ್ಟ್ರೀಯ ವಿಕೋಪ ಸ್ಪಂದನ ನಿಧಿಯ ಮುಂಗಡವನ್ನಾಗಿ ಈ ಪರಿಹಾರವನ್ನು ಮಂಜೂರು ಮಾಡಲಾಗಿದೆ.
ರಾಜ್ಯ ವಿಕೋಪ ಸ್ಪಂದನ ನಿಧಿಯ ಕೇಂದ್ರದ ಪಾಲು ಹಾಗೂ ರಾಷ್ಟ್ರೀಯ ವಿಕೋಪ ಸ್ಪಂದನ ನಿಧಿಯ ಮುಂಗಡವನ್ನಾಗಿ ಕೇಂದ್ರ ಸರಕಾರವು ಗುಜರಾತ್, ಮಣಿಪುರ ಹಾಗೂ ತ್ರಿಪುರ ರಾಜ್ಯಗಳಿಗೆ ಕ್ರಮವಾಗಿ ರೂ. 600 ಕೋಟಿ, ರೂ. 50 ಕೋಟಿ ಹಾಗೂ ರೂ. 25 ಕೋಟಿ ಪ್ರವಾಹ ಪರಿಹಾರವನ್ನು ಮಂಜೂರು ಮಾಡಿದೆ. ಈ ವರ್ಷದ ನೈಋತ್ಯ ಮಾನ್ಸೂನ್ ಮಳೆಯು ಭಾರಿ ಪ್ರಮಾಣದಲ್ಲಿ ಸುರಿದಿದ್ದರಿಂದ, ಈ ರಾಜ್ಯಗಳು ತೀವ್ರವಾಗಿ ಹಾನಿಗೊಳಗಾಗಿದ್ದವು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಯನಾಡ್ ಭೂಕುಸಿತದ ನಂತರ ಕೇರಳ ಸರಕಾರವು ಇತ್ತೀಚೆಗಷ್ಟೆ ಪ್ರವಾಹ ಪರಿಹಾರ ಕೋರಿ ಮನವಿ ಸಲ್ಲಿಸಿತ್ತು. ಆದರೆ, ನಷ್ಟದ ಮೌಲ್ಯಮಾಪನದ ವರದಿ ಕೈಸೇರಿದ ಬಳಿಕ ಕೇರಳ ಸೇರಿದಂತೆ ಅಸ್ಸಾಂ, ಮಿಝೋರಾಂ, ನಾಗಾಲ್ಯಾಂಡ್, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಪ್ರವಾಹ ಬಿಡುಗಡೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.