ಭಾರೀ ಮಳೆಯಾಗುವ ಸಾಧ್ಯತೆ: ತಮಿಳುನಾಡಿನಲ್ಲಿ 7 ದಿನ ಆರೆಂಜ್ ಆಲರ್ಟ್
Photo: PTI
ಹೊಸದಿಲ್ಲಿ: ಮುಂದಿನ ಏಳು ದಿನಗಳವರೆಗೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ತೂತ್ತುಕೂಡಿ, ಶಿವಗಂಗಾ, ರಾಮನಾಥಪುರಂ ಹಾಗೂ ಪುದುಕ್ಕೋಟೈಗಳಲ್ಲಿ ಆರೆಂಜ್ ಆಲರ್ಟ್ ಹೊರಡಿಸಿದೆ.
ತಮಿಳುನಾಡಿನ ದಕ್ಷಿಣ ಭಾಗದ ಹಲವಾರು ಸ್ಥಳಗಳಲ್ಲಿ ಲಘು ಅಥವಾ ಸಾಧಾರಣ ಮಳೆಯಾಗಲಿದೆ. ಉತ್ತರ ತಮಿಳುನಾಡಿನ ಪುದುಚೇರಿ , ಕಾರೈಕಲ್ಗಳಲ್ಲಯೂ ಮಳೆಯಾಗಲಿದೆ.
ಹಿಂದೂ ಮಹಾಸಾಗರ ಹಾಗೂ ಅದಕ್ಕೆ ಸಮೀಪದಲ್ಲಿರುವ ದಕ್ಷಿಣ ಶ್ರೀಲಂಕಾ ಕರಾವಳಿಯಲ್ಲಿರುವ ನೈಋತ್ಯ ಬಂಗಾಳ ಕೊಲ್ಲಿಯಲ್ಲಿದ್ದ ಚಂಡಮಾರುತವು ಈಗ ಕೊಮೊರಿನ್ ಪ್ರದೇಶ ಹಾಗೂ ಅದರ ಆಸುಪಾಸಿನಲ್ಲಿ ನೆಲೆಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Next Story