ಛತ್ತೀಸ್ಗಡ:18 ನಕ್ಸಲರ ಬಂಧನ, ಸ್ಫೋಟಕಗಳು ವಶ

ಸಾಂದರ್ಭಿಕ ಚಿತ್ರ | PC : PTI
ಬಿಜಾಪುರ: ಛತ್ತೀಸ್ಗಡದ ಬಿಜಾಪುರ ಜಿಲ್ಲೆಯ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ಒಟ್ಟು 18 ನಕ್ಸಲರನ್ನು ಬಂಧಿಸಲಾಗಿದ್ದು,ಅವರ ಬಳಿಯಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುಂಜೆಪರ್ಟಿ ಅರಣ್ಯದಲ್ಲಿ 10,ರಾಜಪೆಟ್ನಾ ಅರಣ್ಯದಲ್ಲಿ ಏಳು ಮತ್ತು ಭೈರಾಮಗಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ನಕ್ಸಲ್ ಸ್ಫೋಟಕಗಳ ಸಹಿತ ಭದ್ರತಾ ಪಡೆಗಳ ಬಲೆಗೆ ಬಿದ್ದಿದ್ದಾರೆ.
ಫೆ.9ರಂದು ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ 31 ನಕ್ಸಲರು ಭದ್ರತಾ ಪಡೆಗಳ ಗುಂಡುಗಳಿಗೆ ಬಲಿಯಾಗಿದ್ದರು. ಗುಂಡಿನ ಕಾಳಗದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳೂ ಹುತಾತ್ಮರಾಗಿದ್ದು,ಇತರ ಇಬ್ಬರು ಗಾಯಗೊಂಡಿದ್ದರು.
Next Story