ಚತ್ತೀಸ್ ಗಡ : ಮಾವೋವಾದಿಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ 3 ಭದ್ರತಾ ಸಿಬ್ಬಂದಿ ಬಲಿ
ಸಾಂದರ್ಭಿಕ ಚಿತ್ರ | Photo: NDTV
ಭೋಪಾಲ್: ಚತ್ತೀಸ್ ಗಡದ ಬಿಜಾಪುರ-ಸುಕ್ಮಾ ಗಡಿಯಲ್ಲಿ ಭದ್ರತಾ ಕ್ಯಾಂಪ್ ಮಾಡುತ್ತಿದ್ದಾಗ ಮಾವೋವಾದಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ndtv ವರದಿ ಮಾಡಿದೆ.
ಗಾಯಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಸುಕ್ಮಾದಿಂದ ಸುಮಾರು 400 ಕಿಮೀ ದೂರದಲ್ಲಿರುವ ರಾಯ್ಪುರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ. ಸುಕ್ಮಾ ಜಿಲ್ಲೆಯ ತೆಕುಲಗುಡೆಮ್ ಗ್ರಾಮದಲ್ಲಿ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಮತ್ತು ಮಾವೋವಾದಿ ಚಟುವಟಿಕೆಗಳ ಮೇಲೆ ನಿಗಾ ಇಡಲು ಭದ್ರತಾ ಕ್ಯಾಂಪ್ ಸ್ಥಾಪಿಸಲಾಗಿದ್ದು, ಶಿಬಿರವನ್ನು ಸ್ಥಾಪಿಸಿದ ನಂತರ, ಜಿಲ್ಲಾ ರಿಸರ್ವ್ ಗಾರ್ಡ್, ಕೋಬ್ರಾ ಬೆಟಾಲಿಯನ್ ಮತ್ತು ವಿಶೇಷ ಕಾರ್ಯಪಡೆಗಳು ಗಸ್ತು ತಿರುಗುತ್ತಿದ್ದಾಗ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದರು ಎನ್ನಲಾಗಿದೆ. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದರಿಂದ ಮಾವೋವಾದಿಗಳು ಓಡಿಹೋಗಿ ಕಾಡಿನಲ್ಲಿ ರಕ್ಷಣೆ ಪಡೆದರು ಎಂದು ತಿಳಿದು ಬಂದಿದೆ.
2021ರಲ್ಲಿ ಟೇಕುಲಗುಡೆಂ ಅರಣ್ಯದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು.