ಛತ್ತೀಸ್ಗಡ : ಭದ್ರತಾಪಡೆಗಳ ಎನ್ ಕೌಂಟರ್ ಗೆ ನಕ್ಸಲ್ ಬಲಿ
ಸಾಂದರ್ಭಿಕ ಚಿತ್ರ
ಬಿಜಾಪುರ : ಛತ್ತೀಸ್ಗಡದ ಬಿಜಾಪುರ ಜಿಲ್ಲೆಯಲ್ಲಿ ರವಿವಾರ ಭದ್ರತಾಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ ಓರ್ವ ನಕ್ಸಲೀಯ ಸಾವನ್ನಪ್ಪಿದ್ದಾನೆ. ಜಿಲ್ಲಾ ಮೀಸಲು ಕಾವಲುದಳದ (ಡಿಆರ್ಜಿ) ನೇತೃತ್ವದ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ತೆರಳುತ್ತಿದ್ದಾಗ ಭೈರಾಮಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೆಶ್ಕುತುಲ್ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ.
ಕೇಶ್ಕುತುಲ್ -ಕೇಶಮುಂಡಿ ಅರಣ್ಯ ಪ್ರದೇಶದಲ್ಲಿ ಮಾವೊವಾದಿಗಳ ವಿಭಾಗೀಯ ಪೂರೈಕೆ ತಂಡದ ಕಮಾಂಡರ್ ಕಾವಸಿ ಪಂಡಾರ, ಇತರ 20-30 ಮಂದಿ ಕಾರ್ಯಕರ್ತರೊಂದಿಗೆ ಬೀಡುಬಿಟ್ಟಿದ್ದಾನೆಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿದ್ದವು.
ಗುಂಡಿನ ಚಕಮಕಿ ಸ್ಥಗಿತಗೊಂಡ ಬಳಿಕ ಸ್ಥಳದಲ್ಲಿ ಓರ್ವ ನಕ್ಸಲೀಯನ ಮೃತದೇಹ ಪತ್ತೆಯಾಗಿದೆ. ಒಂದು ಬಂದೂಕು ಹಾಗೂ ಸ್ಫೋಟಕಗಳು ಸ್ಥಳದಲ್ಲಿ ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದವರು ಹೇಳಿದ್ದಾರೆ.
ಇದರೊಂದಿಗೆ ಈ ವರ್ಷ ಛತ್ತೀಸಗಡದ ಬಸ್ತಾರ್ ಪ್ರಾಂತದಲ್ಲಿ ನಡೆಸಿದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಭದ್ರತಾಪಡೆಗಳು ಕನಿಷ್ಠ 80 ಮಂದಿ ನಕ್ಸಲೀಯರನ್ನು ಹತ್ಯೆಗೈದಿವೆ.
ಎಪ್ರಿಲ್ 19ರಂದು, ಕಾಕೆರ್ಜಿಲ್ಲೆಯಲ್ಲಿ ಭದ್ರತಾಪಡೆಗ ಜೊತೆಗಿನ ಎನ್ಕೌಂಟರ್ನಲ್ಲಿ 29 ಮಂದಿ ನಕ್ಸಲೀಯರು ಸಾವನ್ನಪ್ಪಿದ್ದರು.