ಛತ್ತೀಸ್ ಗಡ | ಮೊಬೈಲ್ ನಲ್ಲಿ ಹುಡುಗರೊಂದಿಗೆ ಮಾತನಾಡಿದ್ದಕ್ಕೆ ಗದರಿದ ಅಣ್ಣನನ್ನೇ ಕೊಂದ ಬಾಲಕಿ!
ಸಾಂದರ್ಭಿಕ ಚಿತ್ರ
ರಾಯಪುರ : ಮೊಬೈಲ್ ಫೋನ್ ನಲ್ಲಿ ಹುಡುಗರೊಂದಿಗೆ ಮಾತನಾಡುತ್ತಿದ್ದಕ್ಕೆ ಗದರಿಸಿದ್ದಾಗಿ 14ರ ಹರೆಯದ ಬಾಲಕಿಯೋರ್ವಳು ತನ್ನ ಅಣ್ಣನನ್ನು ಕೊಡಲಿಯಿಂದ ಹೊಡೆದು ಹತ್ಯೆಗೈದ ಆಘಾತಕಾರಿ ಘಟನೆ ಛತ್ತೀಸ್ ಗಡದ ಖೈರಾಗಡ-ಛುಯಿಖದಾನ್-ಗಂಡಯಿ (ಕೆಸಿಜಿ) ಜಿಲ್ಲೆಯ ಅಮಲೀಡಿಹ್ ಕಲಾ ಗ್ರಾಮದಲ್ಲಿ ನಡೆದಿದೆ.
ಆರೋಪಿ ಬಾಲಕಿಯನ್ನು ಪೋಲಿಸರು ಬಂಧಿಸಿದ್ದಾರೆ. ಘಟನೆ ನಡೆದಾಗ ಬಾಲಕಿ ಮತ್ತು ಆಕೆಯ 18ರ ಹರೆಯದ ಸೋದರ ಮಾತ್ರ ಮನೆಯಲ್ಲಿದ್ದು,ಇತರರು ಕೆಲಸಕ್ಕೆ ತೆರಳಿದ್ದರು. ಮೊಬೈಲ್ ಫೋನ್ ನಲ್ಲಿ ಹುಡುಗರೊಂದಿಗೆ ಮಾತನಾಡುತ್ತಿದ್ದಕ್ಕಾಗಿ ತಂಗಿಯನ್ನು ಬೈದಿದ್ದ ಅಣ್ಣ ಇನ್ನು ಮುಂದೆ ಫೋನ್ ಬಳಸದಂತೆ ಸೂಚಿಸಿದ್ದ. ಬಳಿಕ ಆತ ಗಾಢನಿದ್ರೆಯಲ್ಲಿದ್ದಾಗ ಬಾಲಕಿ ಆತನ ಕುತ್ತಿಗೆಗೆ ಕೊಡಲಿ ಬೀಸಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೋಲಿಸರು ತಿಳಿಸಿದರು.
ಘಟನೆಯ ಬಳಿಕ ಸ್ನಾನ ಮಾಡಿದ್ದ ಬಾಲಕಿ ತನ್ನ ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ತೊಳೆದಿದ್ದಳು. ಬಳಿಕ ತನ್ನ ಅಣ್ಣ ಕೊಲೆಯಾಗಿದ್ದಾನೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಳು. ಪೋಲಿಸರು ಪ್ರಶ್ನಿಸಿದಾಗ ಬಾಲಕಿ ಅಣ್ಣನ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಳು.