100 ಪುಟಗಳ ಬಜೆಟ್ ಪ್ರತಿಯನ್ನು ಕೈಯ್ಯಲ್ಲೇ ಬರೆದು ಮಂಡಿಸಿದ ಛತ್ತೀಸ್ಗಢದ ಹಣಕಾಸು ಸಚಿವ!

ಒಪಿ ಚೌಧರಿ |PC : Etv Bharat
ರಾಯ್ಪುರ: ಛತ್ತೀಸ್ಗಢದ ಹಣಕಾಸು ಸಚಿವ ಒಪಿ ಚೌಧರಿ ಅವರು ಮೊದಲ ಬಾರಿಗೆ ರಾಜ್ಯ ವಿಧಾನಸಭೆಯಲ್ಲಿ ಕೈಯ್ಯಲ್ಲಿ ಬರೆದ 100 ಪುಟಗಳ ಬಜೆಟ್ ಮಂಡಿಸಿ ಛತ್ತೀಸ್ಗಢದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಈ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ನಲ್ಲಿ ಟೈಪ್ ಮಾಡಿದ ದಾಖಲೆ ಪ್ರತಿಯನ್ನು ಬಳಸದೆ, ಸಚಿವರು ಕೈಯ್ಯಲ್ಲಿ ಬರೆದ 100 ಪುಟಗಳ 1.65 ಲಕ್ಷ ಕೋಟಿ ರೂ. ಮೊತ್ತದೆ ಬಜೆಟ್ ನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಬಜೆಟ್ ಪ್ರತಿ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
2005ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಚೌಧರಿ ಅವರು 2019ರಲ್ಲಿ ರಾಯ್ಪುರ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಹಿಂದಿಯಲ್ಲಿ ಅವರ ಬಲವಾದ ಪಾಂಡಿತ್ಯವು ಅವರಿಗೆ ಹಿಂದಿಯಲ್ಲಿ ಬಜೆಟ್ ಬರೆಯಲು ಸಹಾಯ ಮಾಡಿದೆ.
ಒಪಿ ಚೌಧರಿ ಅವರು ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾಗಿದ್ದರು.
Next Story