ಸಂಘರ್ಷ ಪೀಡಿತ ಮಣಿಪುರಕ್ಕೆ ಭೇಟಿ ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ MFN ಚಾಂಪಿಯನ್
ಬೆಲ್ಟ್ ಗೆದ್ದ ಬಳಿಕ ಚುಂಗ್ರೆಂಗ್ ಕೋರೆನ್ ಮಾಡಿರುವ ಭಾವುಕ ಭಾಷಣ ವೈರಲ್
Screengrab:X/@zoo_bear
ಹೊಸದಿಲ್ಲಿ: ಮಣಿಪುರದ ಮಿಕ್ಸ್ಟ್ ಮಾರ್ಷಲ್ ಪಟು ಚುಂಗ್ರೆಂಗ್ ಕೋರೆನ್, ಮ್ಯಾಟ್ರಿಕ್ಸ್ ಫೈಟ್ ನೈಟ್ನ (MFN) ನ್ಯೂ ಇಂಟರಿಮ್ ಬ್ಯಾಂಟಮ್ವೇಟ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಗೆಲುವಿನ ನಂತರ, ಕೋರೆನ್ ತನ್ನ ಬೆಲ್ಟ್ ಅನ್ನು ತನ್ನ ತವರು ರಾಜ್ಯವಾದ ಮಣಿಪುರಕ್ಕೆ ಅರ್ಪಿಸಿದ್ದಾರೆ.
ಮಣಿಪುರದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕೆಂದು ಕೋರೆನ್ ಅವರು ಇದೇ ವೇಳೆ ಒತ್ತಾಯಿಸಿದ್ದು, ಮಣಿಪುರಕ್ಕೆ ಭೇಟಿ ನೀಡುವಂತೆ ಪ್ರಧಾನಿಗೆ ಮನವಿ ಮಾಡಿದರು.
“ಇದು ನನ್ನ ವಿನಮ್ರ ವಿನಂತಿ. ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಸುಮಾರು ಒಂದು ವರ್ಷ ಕಳೆದಿದೆ. ಜನರು ಸಾಯುತ್ತಿದ್ದಾರೆ ಮತ್ತು ಅನೇಕ ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ. ಪರಿಹಾರ ಶಿಬಿರಗಳಲ್ಲಿ ಆಹಾರ ಮತ್ತು ನೀರಿನ ಕೊರತೆಯಿದೆ. ಮಕ್ಕಳಿಗೆ ಸರಿಯಾಗಿ ಓದಲು ಸಾಧ್ಯವಾಗುತ್ತಿಲ್ಲ. ಭವಿಷ್ಯವು ಅಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ದಯವಿಟ್ಟು ಮಣಿಪುರಕ್ಕೆ ಒಮ್ಮೆ ಭೇಟಿ ನೀಡಿ ಮತ್ತು ಮಣಿಪುರದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸಿ” ಎಂದು ಕೋರೆನ್ ಅವರು ರಿಂಗ್ ನಲ್ಲಿ ಮಾಡಿರುವ ತಮ್ಮ ಗೆಲುವಿನ ಭಾಷಣದಲ್ಲಿ ಮನವಿ ಮಾಡಿದ್ದಾರೆ.
Interim champion Chungreng Koren has a request for @PMOIndia and reminds him about the ongoing violence in Manipur.
— Mohammed Zubair (@zoo_bear) March 11, 2024
“This Is My Humble request. Violence is happening in manipur.
It has been almost one year. people are dying and many people are in the relief camps. There is food… pic.twitter.com/UVWjmjixX7