ಪ್ರಾದೇಶಿಕ ಭಾಷೆಗಳಲ್ಲಿ ಕಾನೂನು ಶಿಕ್ಷಣಕ್ಕೆ ಸಿಜೆಐ ಡಿ.ವೈ.ಚಂದ್ರಚೂಡ್ ಒತ್ತು
ಡಿ.ವೈ.ಚಂದ್ರಚೂಡ್ | PC : PTI
ಲಕ್ನೋ : ವಿಶ್ವವಿದ್ಯಾಲಯಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕಾನೂನು ಶಿಕ್ಷಣವನ್ನು ನೀಡುವ ಅಗತ್ಯವನ್ನು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು ಶನಿವಾರ ಇಲ್ಲಿ ಒತ್ತಿ ಹೇಳಿದರು.
ರಾಮ ಮನೋಹರ ಲೋಹಿಯಾ ರಾಷ್ಟ್ರೀಯ ಕಾನೂನು ವಿವಿ(ಆರ್ಎಂಎಲ್ಎನ್ಎಲ್ಯು)ಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು,ವಕೀಲರು ತಮ್ಮ ಅಭಿಪ್ರಾಯಗಳನ್ನು ಹಿಂದಿಯಲ್ಲಿಯೂ ಉತ್ತಮವಾಗಿ ಮಂಡಿಸಬಹುದು ಎಂದರು.
ನ್ಯಾಯಾಧೀಶರು ಮತ್ತು ವಕೀಲರು ಇಂಗ್ಲಿಷ್ ಅರ್ಥ ಮಾಡಿಕೊಳ್ಳುತ್ತಾರೆ,ಆದರೆ ಜನಸಾಮಾನ್ಯರಿಗೆ ಅರ್ಥವಾಗುವುದು ಕಷ್ಟವಾಗುತ್ತದೆ. ಹೀಗಾಗಿ ತೀರ್ಪುಗಳು ಇಂಗ್ಲಿಷ್ ಜೊತೆ ಪ್ರಾದೇಶಿಕ ಭಾಷೆಗಳಲ್ಲಿಯೂ ಇರಬೇಕು ಎಂದು ಹೇಳಿದ ನ್ಯಾ.ಚಂದ್ರಚೂಡ್, ನ್ಯಾಯಾಲಯದ ಹೆಚ್ಚಿನ ತೀರ್ಪುಗಳು ಇಂಗ್ಲಿಷ್ನಲ್ಲಿ ಇರುವುದರಿಂದ ಜನಸಾಮಾನ್ಯರಿಗೆ ಅವು ಅರ್ಥವಾಗುವುದಿಲ್ಲ ಎಂದರು.
ಹಿಂದಿ ಮಾಧ್ಯಮದ ಮೂಲಕವೂ ಎಲ್ಎಲ್ಬಿ ಕೋರ್ಸ್ ನಡೆಸುವಂತೆ ಅವರು ಆರ್ಎಂಎಲ್ಎನ್ಎಲ್ಯುಗೆ ಆಗ್ರಹಿಸಿದರು.
Next Story