ಮಣಿಪುರದಲ್ಲಿ ಭದ್ರತಾ ಪಡೆಗಳು, ಸಶಸ್ತ್ರ ಪ್ರತಿಭಟನಕಾರರ ನಡುವೆ ಸಂಘರ್ಷ
Photo: NDTV
ಇಂಫಾಲ: ಮಣಿಪುರದ ಟೆಂಗ್ ನೌಪಲ್ ಜಿಲ್ಲೆಯ ಪಲ್ಲೆಲ್ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆಯಿಂದ ಭದ್ರತಾ ಪಡೆಗಳು ಮತ್ತು ಸಶಸ್ತ್ರ ಪ್ರತಿಭಟನಕಾರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಂಡಿನ ಚಕಮಕಿಯು ಬೆಳಗ್ಗೆ 6 ಗಂಟೆಗೆ ಆರಂಭವಾಯಿತು ಎಂದು ಅವರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.
ಬಿಷ್ಣುಪುರ ಜಿಲ್ಲೆಯ ಫೌಗಾಕ್ಚೊ ಇಖಾಯಿ ಎಂಬಲ್ಲಿ ಸಾವಿರಾರು ಪ್ರತಿಭಟನಕಾರರು ಜಮಾಯಿಸಿ ತೋರ್ಬಂಗ್ ನಲ್ಲಿರುವ ತಮ್ಮ ಪರಿತ್ಯಕ್ತ ಮನೆಗಳಿಗೆ ಹೋಗುವ ಪ್ರಯತ್ನವಾಗಿ ಸೇನಾ ತಡೆಬೇಲಿಗಳನ್ನು ಕೆಡವಲು ಪ್ರಯತ್ನಿಸಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಕ್ಷಿಪ್ರ ಕಾರ್ಯಾಚರಣೆ ಪಡೆ, ಅಸ್ಸಾಮ್ ರೈಫಲ್ಸ್ ಮತ್ತು ಮಣಿಪುರ ಪೊಲೀಸರನ್ನು ಒಳಗೊಂಡ ಭದ್ರತಾ ಪಡೆಗಳು ಜನರನ್ನು ಚದುರಿಸಿ ಪರಿಸ್ಥಿತಿಯನ್ನು ತಹಬಂದಿಗೆ ತರಲು ಅಶ್ರುವಾಯು ಶೆಲ್ ಗಳನ್ನು ಸಿಡಿಸಿವೆ
Next Story