ಕುಸಿದು ಬಿದ್ದ ವೇದಿಕೆ: ಮಾಜಿ ಗೃಹಸಚಿವ ಸೇರಿ ಹಲವು ನಾಯಕರಿಗೆ ಗಾಯ
Screengrab from the video | Twitter
ಆಂಧ್ರಪ್ರದೇಶ: ಕಾರ್ಯಕ್ರಮವೊಂದು ನಡೆಯುತ್ತಿದ್ದ ವೇಳೆ ವೇದಿಕೆ ಕುಸಿದು ಬಿದ್ದ ಪರಿಣಾಮ ಮಾಜಿ ಗೃಹ ಸಚಿವರು ಸೇರಿ ತೆಲುಗು ದೇಶಂ ಪಕ್ಷ (ಟಿಡಿಪಿ)ದ 10 ಮುಖಂಡರು ಗಾಯಗೊಂಡಿರುವ ಘಟನೆ ನಡೆದಿದೆ.
ಏಲೂರು ಜಿಲ್ಲೆಯ ಬತ್ತುಲವಾರಿಗುಡೆಂ ಎಂಬಲ್ಲಿ ಪಕ್ಷದ ವತಿಯಿಂದ ‘ಭವಿಷ್ಯದ ಭರವಸೆ’ ಎಂಬ ಕಾರ್ಯಕ್ರಮ ನಡೆದಿದ್ದು, ಮಾಜಿ ಗೃಹ ಸಚಿವ ನಿಮ್ಮಕಾಯಲ ಚಿನ್ನರಾಜಪ್ಪ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಟಿಡಿಪಿ ನಾಯಕರು ಕುಳಿತಿದ್ದ ವೇದಿಕೆ ಕುಸಿದು ಬಿದ್ದಿದೆ.
"ಆಕಸ್ಮಿಕವಾಗಿ ವೇದಿಕೆ) ಕುಸಿದಿದೆ. ಮಾಜಿ ಗೃಹ ಸಚಿವ ಚಿನ್ನರಾಜಪ್ಪ ಮತ್ತು ಮಾಜಿ ಸಂಸದ ಮಾಗಂಟಿ ಬಾಬು ಸೇರಿ ಕೆಲವರಿಗೆ ಗಾಯಗಳಾಗಿವೆ’’ ಎಂದು ಟಿಡಿಪಿ ವಕ್ತಾರರು ಮಾಹಿತಿ ನೀಡಿದ್ದಾರೆ.
ಒದ್ದೆ ಮಣ್ಣಿನ ಮೇಲೆ ವೇದಿಕೆಯನ್ನು ನಿರ್ಮಿಸಿದ ಕಾರಣ ಮತ್ತು ಜೋರಾದ ಗಾಳಿ ಬೀಸಿದ ಪರಿಣಾಮ ವೇದಿಕೆ ಕುಸಿದಿದೆ ಎನ್ನಲಾಗಿದೆ.
Ground gave away under their feet ... At #Nuzivid #Amaravati, where #TDP party event was underway, there were heavy winds @Battulavarigudem & stage collapsed; among those present were @JaiTDP leaders Chinnarajappa, Chinthamaneni, Peethala Sujatha @ndtv @ndtvindia pic.twitter.com/IeYnV4p6Uh
— Uma Sudhir (@umasudhir) June 24, 2023