ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 25 ರೂ. ಹೆಚ್ಚಳ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ತಕ್ಷಣವೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ರೂ.25 ರಷ್ಟು ಹೆಚ್ಚಳ ಮಾಡಿದೆ.
ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಅನುಗುಣವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಕಂಪನಿಗಳು ತಿಳಿಸಿವೆ. ದಿಲ್ಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್ ದರವು ರೂ. 1,795ಕ್ಕೆ ಏರಿಕೆ ಆಗಿದ್ದು, ಮುಂಬೈನಲ್ಲಿ ರೂ. 1,749ಕ್ಕೆ ಏರಿಕೆಯಾಗಿದೆ.
14.2 ಕೆ.ಜಿಯ ಗೃಹ ಬಳಕೆ ಸಿಲಿಂಡರ್ ದರವು ಯಥಾಸ್ಥಿತಿಯಲ್ಲಿದೆ.
Next Story