ಜಮ್ಮು-ಕಾಶ್ಮೀರ ಚುನಾವಣೆ: ಕಥುವಾ ಅತ್ಯಾಚಾರ ಆರೋಪಿಗೆ ಬೆಂಬಲಿಸಿದ್ದ ಚೌಧರಿ ಲಾಲ್ ಸಿಂಗ್ ಗೆ ಸೋಲು
ಚೌಧರಿ ಲಾಲ್ ಸಿಂಗ್ | PC : ANI
ಜಮ್ಮು-ಕಾಶ್ಮೀರ: ಕಥುವಾ ಅತ್ಯಾಚಾರ ಆರೋಪಿಗೆ ಬೆಂಬಲಿಸಿದ್ದ ಕಾಂಗ್ರೆಸ್ ನ ಬಸೋಹ್ಲಿ ಕ್ಷೇತ್ರದ ಅಭ್ಯರ್ಥಿ ಚೌಧರಿ ಲಾಲ್ ಸಿಂಗ್ ಬಿಜೆಪಿ ಅಭ್ಯರ್ಥಿ ದರ್ಶನ್ ಕುಮಾರ್ ವಿರುದ್ಧ 16,034 ಮತಗಳಿಂದ ಸೋಲನ್ನು ಕಂಡಿದ್ದಾರೆ.
ಬಸೋಹ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದರ್ಶನ್ ಕುಮಾರ್ 31,874 ಮತಗಳನ್ನು ಗಳಿಸಿದರೆ, ಜಮ್ಮು- ಕಾಶ್ಮೀರದ ಮಾಜಿ ಸಚಿವ ಚೌಧರಿ ಲಾಲ್ ಸಿಂಗ್ ಅವರು ಒಟ್ಟು 15,840 ಮತಗಳಿಗೆ ತೃಪ್ತಿ ಪಡುವಂತಾಗಿದೆ.
2014ರ ವಿಧಾನಸಭಾ ಚುನಾವಣೆಯಲ್ಲಿ ಸಿಂಗ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಬಸೋಹ್ಲಿ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2024ರ ಲೋಕಸಭೆಯ ಚುನಾವಣೆಯ ಹೊಸ್ತಿಲಲ್ಲಿ ಅವರು ಕಾಂಗ್ರೆಸ್ ಗೆ ಮರಳಿದ್ದರು.
2018ರಲ್ಲಿ ಬಿಜೆಪಿ ಮತ್ತು ಪಿಡಿಪಿ ಸಮ್ಮಿಶ್ರ ಸರಕಾರದಲ್ಲಿ ರಾಜ್ಯ ಸಚಿವರಾಗಿದ್ದ ಚೌಧರಿ ಲಾಲ್ ಸಿಂಗ್, ಕಥುವಾದಲ್ಲಿ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯನ್ನು ಬೆಂಬಲಿಸಿ ರ್ಯಾಲಿಯನ್ನು ನಡೆಸಿ ಟೀಕೆಗೆ ಗುರಿಯಾಗಿದ್ದರು.
Next Story