ಟಿಎಂಸಿ ಬಳಿಕ ಕಾಂಗ್ರೆಸ್ ಸರದಿ | ಅಮಿತ್ ಶಾ ವಿರುದ್ಧ ಹಕ್ಕು ನಿರ್ಣಯ ಮಂಡನೆ
Photo credit: X/@priyankagandhi
ಹೊಸದಿಲ್ಲಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಗುರುವಾರ ಸಂಸತ್ತಿನಲ್ಲಿ ವಿಶೇಷ ಹಕ್ಕು ನಿರ್ಣಯ ಮಂಡಿಸಿದೆ.
ಡಿಸೆಂಬರ್ 17 ರಂದು ರಾಜ್ಯಸಭೆಯಲ್ಲಿ ಮಾತನಾಡಿದ ಶಾ, ಕಾಂಗ್ರೆಸ್ ನಾಯಕರು "ಅಂಬೇಡ್ಕರ್ ಅವರ ಹೆಸರನ್ನು ಪುನರಾವರ್ತಿಸುವ ಶೈಲಿಯನ್ನು ಅನುಸರಿಸುವುದಕ್ಕಿಂತ ಹೆಚ್ಚಾಗಿ ದೇವರ ನಾಮವನ್ನು ಜಪಿಸಿದ್ದರೆ ಸ್ವರ್ಗದಲ್ಲಿ ಸ್ಥಾನ ಪಡೆಯುತ್ತಿದ್ದರು" ಎಂದು ಪ್ರತಿಕ್ರಿಯಿಸಿದ್ದರು.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ'ಬ್ರೇನ್ ಅವರು ವಿಶೇಷ ಹಕ್ಕು ನಿರ್ಣಯ ಮಂಡಿಸಿದ ಒಂದು ದಿನದ ನಂತರ, ಅಮಿತ್ ಶಾ ಡಾ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ಹಕ್ಕು ನಿರ್ಣಯ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಅಂಬೇಡ್ಕರ್ ಅವರ ಪರಂಪರೆಗೆ ಬಿಜೆಪಿ ಅಗೌರವ ತೋರುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವಂತೆಯೇ ಗೃಹ ಸಚಿವರ ಈ ಹೇಳಿಕೆ ಸಂಸತ್ತಿನ ಒಳಗೆ ಮತ್ತು ಹೊರಗೆ ಕೋಲಾಹಲ ಎಬ್ಬಿಸಿದೆ.