ಮಹಿಳಾ ಮೀಸಲಾತಿ ಜಾರಿಗೆ ಕಾಂಗ್ರೆಸ್ ಪಟ್ಟು : ಕೇಂದ್ರಕ್ಕೆ ಸುಪ್ರೀಂ ನೋಟಿಸ್
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ : ಮಹಿಳೆಯರಿಗೆ ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಸಭೆಯಲ್ಲಿ 3ನೇ ಒಂದು ಭಾಗ ಮೀಸಲಿಡುವ ನಾರಿ ವಂದನಾ-2023 ಕಾಯಿದೆಯನ್ನು ಲೋಕಸಭೆ ಚುನಾವಣೆಗೂ ಮುನ್ನವೇ ಜಾರಿ ಮಾಡಲು ಆದೇಶಿಸುವಂತೆ ಕೋರಿರುವ ಕಾಂಗ್ರೆಸ್ ಅರ್ಜಿಗೆ ಕೇಂದ್ರ ಸರಕಾರ ಎರಡು ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಕೇಂದ್ರ ಸರಕಾರದ ಪರ ಹಾಜರಿದ್ದ ನ್ಯಾಯವಾದಿ ಕನು ಅಗರ್ವಾಲ್ ಅವರು, ನ್ಯಾ.ಸಂಜೀವ್ ಖನ್ನಾ ಹಾಗೂ ನ್ಯಾ.ದೀಪಂಕರ್ ದತ್ತಾ ಅವರಿದ್ದ ಪೀಠದ ಮುಂದೆ ಅರ್ಜಿಗೆ ಪ್ರತಿಕ್ರಿಯಿಸಲು ಕಾಲಾವಕಾಶ ಕೋರಿದರು. ಲೋಕಸಭೆ ಚುನಾವಣೆಗೂ ಮುನ್ನವೇ ಕಾಯಿದೆಯನ್ನು ಜಾರಿ ತರುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರಾದ ಜಯಾ ಠಾಕೂರ್ ಪರ ಹಾಜರಿದ್ದ ನ್ಯಾಯವಾದಿ ವಿಕಾಸ್ ಸಿಂಗ್ ಅವರು ಮನವಿ ಮಾಡಿದರು.
ಮನವಿಗೆ ಪ್ರತಿಕ್ರಿಯಿಸಿದ ನ್ಯಾ.ಸಂಜೀವ್ ಖನ್ನಾ, “ನ್ಯಾಯಾಲದಯವು ನಿರ್ದೇಶನ ನೀಡಲು ಸಾಧ್ಯವಿಲ್ಲ. ಈ ಕುರಿತಂತೆ ಕೇಂದ್ರದ ಪ್ರತಿಕ್ರಿಯೆ ಬರುವವರೆಗೂ ಕಾಯುಬೇಕು” ಎಂದರು.
Next Story