ಕ್ಯಾನ್ಸರ್ ಕಾರಕ ರಾಸಾಯನಿಕ ದೃಢ: ತಮಿಳುನಾಡಿನಲ್ಲಿ ʼಬೊಂಬಾಯಿ ಮಿಠಾಯಿʼಗೆ ನಿಷೇಧ
Photo | newindian express
ಚೆನ್ನೈ: ತಮಿಳುನಾಡು ಸರಕಾರವು ಕ್ಯಾನ್ಸರ್ ಕಾರಕ ರಾಸಾಯನಿಕಗಳಿರುವುದನ್ನು ದೃಢಪಡಿಸಿರುವ ಪರೀಕ್ಷಾ ವರದಿಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಟನ್ ಕ್ಯಾಂಡಿ ಅಥವಾ ಬೊಂಬಾಯಿ ಮಿಠಾಯಿ ಮಾರಾಟವನ್ನು ನಿಷೇಧಿಸಿದೆ.
ಬೊಂಬಾಯಿ ಮಿಠಾಯಿ ಮತ್ತು ಇತರ ಬಣ್ಣದ ಕ್ಯಾಂಡಿ ಪ್ರಭೇದಗಳಲ್ಲಿ ಹಾನಿಕಾರಕ ರಾಸಾಯನಿಕಗಳ ಉಪಸ್ಥಿತಿಯನ್ನು ಸೂಚಿಸಿದ ವರದಿಗಳ ಬಳಿಕ ಸರಕಾರವು ಅವುಗಳನ್ನು ಪರೀಕ್ಷೆಗೊಳಪಡಿಸಿತ್ತು. ಪರೀಕ್ಷೆಯ ವರದಿಗಳು ಅವುಗಳಲ್ಲಿ ಕೃತಕ ಬಣ್ಣವನ್ನು ನೀಡುವ ರಾಸಾಯನಿಕ ರೋಡಮಿನ್-ಬಿ (Rhodamine-B) ಇರುವಿಕೆಯನ್ನು ದೃಢಪಡಿಸಿವೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (ಎಫ್ಎಸ್ಎಸ್ಎ),2006 ಅಡಿ ಇದು ಕಳಪೆ ಗುಣಮಟ್ಟದ,ಅಸುರಕ್ಷಿತ ಆಹಾರ ಎನ್ನುವುದು ದೃಢಪಟ್ಟಿದೆ.
ಎಫ್ಎಸ್ಎಸ್ಎ ಅಡಿ ಆಹಾರ,ಪ್ಯಾಕಿಂಗ್,ರಫ್ತು ಮತ್ತು ಮಾರಾಟಗಳಲ್ಲಿ ರೋಡಮಿನ್-ಬಿ ಬಳಕೆಯು ದಂಡನೀಯ ಅಪರಾಧವಾಗಿದೆ.
Next Story