ನಮಾಝ್ ಮಾಡುತ್ತಿದ್ದವರ ಮೇಲೆ ಪೊಲೀಸ್ ಸಿಬ್ಬಂದಿಯ ದೌರ್ಜನ್ಯ ಪ್ರಕರಣ: ವರದಿ ಕೇಳಿದ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ: ದಿಲ್ಲಿಯ ಇಂದರ್‌ಲೋಕ್ ಪ್ರದೇಶದಲ್ಲಿ ಕಳೆದ ಶುಕ್ರವಾರ ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಮಾಡುತ್ತಿದ್ದವರಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ತುಳಿದ ಘಟನೆಗೆ ಸಂಬಂಧಿಸಿದಂತೆ ದಿಲ್ಲಿಯ ನ್ಯಾಯಾಲಯವೊಂದು ವರದಿ ಸಲ್ಲಿಸುವಂತೆ ಡಿಸಿಪಿಗೆ ಆದೇಶಿಸಿದೆ.
ಮುಂದಿನ ವಿಚಾರಣೆ ನಡೆಯುವ ಮೇ 1ರೊಳಗಾಗಿ ಕ್ರಮಕೈಗೊಂಡ ಕುರಿತಾದ ವರದಿ ಸಲ್ಲಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.
ಇಂದರ್‌ಲೋಕ್ ಪ್ರದೇಶದ ಮಕ್ಕಿ ಜಾಮಾ ಮಸೀದಿಯ ಪಕ್ಕ ನಮಾಝ್ ಮಾಡುತ್ತಿದ್ದವರನ್ನು ಎಸ್ಸೈ ಮನೋಜ್ ತೋಮರ್ ತುಳಿಯುತ್ತಿರವ ವೀಡಿಯೋ ವೈರಲ್ ಆದ ಬೆನ್ನಿಗೇ ಪೊಲೀಸ್ ಅಧಿಕಾರಿಯನ್ನು ಮಾರ್ಚ್ 8ರಂದು ಅಮಾನತುಗೊಳಿಸಲಾಯಿತು ಹಾಗೂ ಇಲಾಖಾ ತನಿಖೆ ಸದ್ಯ ನಡೆಸಲಾಗುತ್ತಿದೆ.
Next Story