ಕೇರಳದಲ್ಲಿ ಕೋವಿಡ್-19ರ ಉಪ ತಳಿ JN.1 ಪತ್ತೆ
Photo : PTI
ತಿರುವನಂತಪುರಂ: ಕೇರಳದಲ್ಲಿ ಡಿಸೆಂಬರ್ 8ರಂದು ಕೋವಿಡ್-19ರ ಉಪ ತಳಿ ಜೆಎನ್.1 (JN.1) ಪತ್ತೆಯಾಗಿತ್ತು ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ನವೆಂಬರ್ 18ರಂದು ನಡೆಸಿದ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ. ಸೋಕಿತರು 79 ವರ್ಷದ ಮಹಿಳೆ ಎನ್ನಲಾಗಿದೆ.
ಶೀತ–ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ ಹೊಂದಿದ್ದ ರೋಗಿ, ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗ ದೇಶದಲ್ಲಿ ದೃಢಪಟ್ಟಿರುವ ಶೇ 90ರಷ್ಟು ಕೋವಿಡ್ ಪ್ರಕರಣಗಳಲ್ಲಿ ರೋಗಿಗಳು ಸಾಮಾನ್ಯ ಲಕ್ಷಣಗಳನ್ನು ಹೊಂದಿದ್ದಾರೆ. ಸೋಂಕಿತರಿಗೆ ಮನೆಯಲ್ಲಿಯೇ ಕ್ವಾರಂಟೇನ್ ಮಾಡಲಾಗುತ್ತಿದೆ.
ಅಕ್ಟೋಬರ್ 25ರಂದು ತಮಿಳುನಾಡಿನಿಂದ ಸಿಂಗಾಪುರಕ್ಕೆ ತೆರಳಿದ್ದ ಭಾರತೀಯ ಪ್ರಯಾಣಿಕರೊಬ್ಬರಲ್ಲೂ ಜೆಎನ್.1 ಉಪ ತಳಿ ಪತ್ತೆಯಾಗಿತ್ತು. ಕೋವಿಡ್-19ರ ಉಪ ತಳಿ ಜೆಎನ್.1 ಮೊದಲ ಪ್ರಕರಣ ಲಕ್ಸೆಂಬರ್ಗ್ನಲ್ಲಿ ಪತ್ತೆಯಾಗಿತ್ತು. ಬಳಿಕ ಅದು ಹಲವು ದೇಶಗಳಿಗೆ ಹಬ್ಬಿತ್ತು.
Next Story