ಗಾಝಾ ನರಮೇಧವನ್ನು ಖಂಡಿಸುವ ನಿರ್ಣಯ ಅಂಗೀಕರಿಸಿದ ಸಿಪಿಎಂ
ಫೆಲೆಸ್ತೀನಿ ಕೆಫಿಯೇ (ಶಾಲು) ಹಾಕಿಕೊಂಡು ಬಂದ ಪ್ರತಿನಿಧಿಗಳು

Photo: Facebook/Abdul Muneer
ಮಧುರೈ : ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸುವ ಕರಡು ನಿರ್ಣಯವನ್ನು ಸಿಪಿಐಎಂ ಅಂಗೀಕರಿಸಿದೆ.
ಮಧುರೈನಲ್ಲಿ ನಡೆದ ಸಿಪಿಐಎಂ ಪಕ್ಷದ 24ನೇ ಸಮ್ಮೇಳನದಲ್ಲಿ ಪ್ರತಿನಿಧಿಗಳು ಫೆಲೆಸ್ತೀನಿಯರು ಬಳಸುವ ಕೆಫಿಯೇ (ಶಾಲು) ಹಾಕಿಕೊಂಡು ಫೆಲೆಸ್ತೀನ್ ಜೊತೆ ಒಗ್ಗಟ್ಟನ್ನು ಪ್ರದರ್ಶಿಸಿದರು. ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸುವ ಕರಡು ನಿರ್ಣಯವನ್ನು ಅಂಗೀಕರಿಸಿದರು.
ಈ ವೇಳೆ ಕೇರಳ ಸಿಎಂ ಪಿಣರಾಯ್ ವಿಜಯನ್, ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾಕಾರಟ್, ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಸೇರಿದಂತೆ ಸಿಪಿಎಂ ನಾಯಕರು ಉಪಸ್ಥಿತರಿದ್ದರು.
Next Story