ಚಂದ್ರಶೇಖರ್ ಆಝಾದ್ ಗೆ ಸಿಆರ್ಪಿಎಫ್ ‘ವೈ ಪ್ಲಸ್’ ಭದ್ರತೆ
ಚಂದ್ರಶೇಖರ್ ಆಝಾದ್ | Photo: PTI
ಹೊಸದಿಲ್ಲಿ : ಭೀಮ್ ಆರ್ಮಿ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ರಿಗೆ ಉತ್ತರಪ್ರದೇಶದಲ್ಲಿ ಸಿಆರ್ಪಿಎಫ್ ‘ವೈ ಪ್ಲಸ್’ ಭದ್ರತೆಯನ್ನು ನೀಡಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಗುಪ್ತಚರ ವರದಿಗಳನ್ನು ಆಧರಿಸಿ, ಆಝಾದ್ ರಿಗೆ ಇರುವ ಭದ್ರತಾ ಬೆದರಿಕೆಯನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಗಣ್ಯ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ, ಅವರಿಗೆ ಉತ್ತರಪ್ರದೇಶದಲ್ಲಿ ಮಾತ್ರ ಭದ್ರತೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆಝಾದ್, ಉತ್ತರಪ್ರದೇಶ ಮತ್ತು ಅದರಾಚೆಗಿನ ತುಳಿತಕ್ಕೊಳಗಾದ ಸಮುದಾಯಗಳ, ಅದರಲ್ಲೂ ಮುಖ್ಯವಾಗಿ ದಲಿತರ ಹಕ್ಕುಗಳ ಹೋರಾಟಗಾರರಾಗಿದ್ದಾರೆ.
Next Story