ಬಜೆಟ್ನಲ್ಲಿ ದೀರ್ಘಾವಧಿ ಬಂಡವಾಳ ಲಾಭದ ಮೇಲಿನ ತೆರಿಗೆ ಏರಿಕೆ: ಷೇರು ಮಾರುಕಟ್ಟೆ ಕುಸಿತ
ಹೂಡಿಕೆದಾರರಿಗೆ ನಷ್ಟ
ಸಾಂದರ್ಭಿಕ ಚಿತ್ರ (PTI)
ಮುಂಬೈ: ಪ್ರಸಕ್ತ ಹಣಕಾಸು ವರ್ಷ 2024-25ರ ಬಜೆಟ್ ಅನ್ನು ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾಗಿದ್ದು, ಸೆನ್ಸೆಕ್ಸ್ನಲ್ಲಿ ಕುಸಿತ ಕಂಡಿದೆ. ಮಂಗಳವಾರ ಆರಂಭವಾಗಿದ್ದ ಷೇರು ಮಾರುಕಟ್ಟೆ ಕುಸಿತ ಇಂದು ಕೂಡ ಮುಂದುವರಿದಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಅಂಶಗಳು ಆರಂಭಿಕ ವಹಿವಾಟಿನ ವೇಳೆಗೆ ಇಳಿಕೆಯಾಗಿವೆ.
ಬಾಂಬೆ ಷೇರು ಮಾರುಕಟ್ಟೆಯ ಸೂಚ್ಯಂಕ 233.7 ಅಂಶಗಳಷ್ಟು ಇಳಿಕೆಯಾಗಿದ್ದು, ನಿಫ್ಟಿ 73.45 ಅಂಶ ಇಳಿಕೆಯಾಗಿದೆ.
ಮಹೀಂದ್ರಾ & ಮಹೀಂದ್ರಾ, ಅದಾನಿ ಪೋರ್ಟ್ಸ್, ಬಜಾಜ್ ಫೈನಾನ್ಸ್, ಎಚ್ಸಿಎಲ್ ಸಹಿತ ಹಲವು ಕಂಪನಿಗಳು ನಷ್ಟ ಅನುಭವಿಸಿವೆ ಎಂದು ವರದಿಯಾಗಿದೆ.
Next Story