ಕರ್ನಾಟಕದಲ್ಲಿ ಎಸ್ಸಿ, ಎಸ್ಟಿ ನಿಧಿ ಬೇರೆ ಉದ್ದೇಶಕ್ಕೆ ಬಳಕೆಗೆ ನಿರ್ಧಾರ | ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಕಳವಳ
NCSC | PC : linkedin.com
ಹೊಸದಿಲ್ಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಕುರಿತಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (NCSC)ಕರ್ನಾಟಕ ಸರಕಾರದಿಂದ ವಿಸ್ತೃತ ವರದಿ ಕೋರಿದೆ.
ಮಾಧ್ಯಮ ವರದಿಯನ್ನು ಅನುಸರಿಸಿ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (SCSP) ಹಾಗೂ ಬುಡಕಟ್ಟು ಉಪ ಯೋಜನೆ (TSP) ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಕುರಿತ ಈ ನಿರ್ಧಾರವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (NCSC) ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಎನ್ಸಿಎಸ್ಸಿ, ಎಸ್ಸಿಎಸ್ಪಿ ಹಾಗೂ ಟಿಎಸ್ಪಿ ಅಡಿಯಲ್ಲಿ ಮೀಸಲಿಡಲಾದ 14,730 ಕೋ.ರೂ.ವನ್ನು 5 ಗ್ಯಾರಂಟಿ ಯೋಜನೆಗಳು ಎಂದು ಕರೆಯಲಾಗುವ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮರು ಹಂಚಿಕೆ ಮಾಡಲು ಕರ್ನಾಟಕ ಸರಕಾರ ನಿರ್ಧರಿಸುವುದರ ಬಗ್ಗೆ ಗಮನ ಸೆಳೆದಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಾಮಾಜಿಕ ಹಾಗೂ ಆರ್ಥಿಕ ಕಲ್ಯಾಣದ ಉತ್ತೇಜನ ನೀಡುವಲ್ಲಿ ಈ ನಿಧಿಯ ಪ್ರಾಮುಖ್ಯತೆಯನ್ನು ಕೂಡ ಆಯೋಗ ಒತ್ತಿ ಹೇಳಿದೆ.
ಪತ್ರದಲ್ಲಿ ಎನ್ಸಿಎಸ್ಸಿ, ಈ ನಿರ್ಧಾರದ ಕುರಿತಂತೆ 7 ದಿನಗಳ ಒಳಗೆ ರಾಜ್ಯ ಸರಕಾರದಿಂದ ವಿಸ್ತೃತ ವರದಿ ಕೋರಿದೆ. ಅಲ್ಲದೆ, ಪರಿಸ್ಥಿತಿಯ ತುರ್ತು ಹಾಗೂ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಯಾವುದೇ ಧಕ್ಕೆಯಾಗದೆ ನಿಧಿಯ ತಿರುವು ಹಾಗೂ ರೂಪುರೇಷೆ ಕ್ರಮಗಳ ಹಿಂದಿರುವ ತಾರ್ಕಿಕತೆ ವಿವರಿಸುವ ಸಮಗ್ರ ವರದಿಯನ್ನು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಒದಗಿಸುವ ನಿರೀಕ್ಷೆ ಇದೆ ಎಂದು ಎನ್ಸಿಎಸ್ಸಿ ಹೇಳಿದೆ.